ಜೂನ್‌ 28ರಿಂದ ಜೋಗ ಫಾಲ್ಸ್‌ ವೀಕ್ಷಣೆಗೆ ಅವಕಾಶ, ನಿಯಮ ಪಾಲನೆ ಕಡ್ಡಾಯ

ಶಿವಮೊಗ್ಗ :ಜೂನ್‌ 28ರಿಂದ ವಿಶ್ವವಿಖ್ಯಾತ ಜೋಗದ ಜಲಪಾತವನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ.
ಕೊರೊನಾ ಸೋಂಕಿನ ಲಾಕ್ ಡೌನ್ ನಂತರ ಬಂದ್ ಆಗಿತ್ತು. ಈಗ ಜೋಗದ ಸೊಬಗಿನ ವೀಕ್ಷಣೆ ವೀಕ್ಷಕರಿಗಾಗಿ ತೆರೆದುಕೊಳ್ಳಲಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸೋದು ಕಡ್ಡಾಯವಾಗಿದೆ.
ಈ ಕುರಿತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ಬಂದ್ ಆಗಿದ್ದ ಪ್ರಸಿದ್ಧ ಪ್ರವಾಸಿ ತಾಣ ಜೋಗದ ಜಲಪಾತ ವೀಕ್ಷಿಸಲು, ನಾಳೆಯಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಜಲಪಾತವನ್ನು ವೀಕ್ಷಿಸಬಹುದಾಗಿದೆ.
ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಆಗಮಿಸಬೇಕು. ಜೊತೆಗೆ ವೀಕ್ಷಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಅಲ್ಲದೇ ಸ್ವಚ್ಛತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement