ಶೇ.5ರ ರಿಯಾಯ್ತಿಯೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ

posted in: ರಾಜ್ಯ | 0

ಹುಬ್ಬಳ್ಳಿ:ಸರ್ಕಾರದ ಸುತ್ತೋಲೆ ಅನ್ವಯ ಪ್ರಸಕ್ತ ಸಾಲಿನಲ್ಲಿ ಏಪ್ರೀಲ್ 1 ರಿಂದ ಜೂನ್ 30 ರವರೆಗೆ ಶೇ.5 ರಷ್ಟು ರಿಯಾಯ್ತಿಯೊಂದಿಗೆ ಆಸ್ತಿ ತೆರಿಗೆ ಪಾವತಿಸಲು ಅವಕಾಶ ನೀಡಿದ್ದ ಕಾಲಮಿತಿಯನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಕೋವಿಡ್ -19 ಹರಡುತ್ತಿರುವುದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ತೆರಿಗೆ ಪಾವತಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಆಗಸ್ಟ್ 1 ರಿಂದ ಮಾಸಿಕ ಶೇ. 2 ರಷ್ಟು ದಂಡದೊಂದಿಗೆ ಆಸ್ತಿ ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಆನ್ ಲೈನ್ ನಲ್ಲಿ http://www.hdmc.mrc.gov.in ವೆಬ್ ಸೈಟ್ ಮೂಲಕ ವಿವಿಧ UPI, G-Pay, Phonepe, Paytm ಹಾಗೂ NEFT/ RTGS ಮುಖಾಂತರ INDIAN Overseas Bank ಖಾತೆ ಸಂಖ್ಯೆ 012601000202020 ಐ. ಎಫ್. ಎ.ಸಿ. ಕೋಡ್ IOBA 0000126, YES Bank ಖಾತೆ ಸಂಖ್ಯೆ 024981300000014 ಐ.ಎಫ್.ಎಸ್.ಸಿ.ಕೋಡ್ YESB0000249, CANARA Bank ಖಾತೆ ಸಂಖ್ಯೆ 2538106003554 ಐ. ಎಫ್. ಎ.ಸಿ. ಕೋಡ್ CNRB0002538, ಮತ್ತು INDUSIND Bank ಖಾತೆ ಸಂಖ್ಯೆ100032405328 ಐ.ಎಫ್.ಎಸ್.ಸಿ. ಕೋಡ್ INDB0000058 ಖಾತೆಗಳಿಗೆ ಸಾರ್ವಜನಿಕರು ಆಸ್ತಿಕರ ಸಂದಾಯ ಮಾಡಬಹುದಾಗಿದೆ.
ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರೂ ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ