ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದ್ದು, ಕುಟುಂಬದ 6 ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲ ಭಾದೆ ತಾಳದೆ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಶಂಕಿಸಲಾಗಿದ್ದು, ದಂಪತಿ ತಮ್ಮ 4 ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಪತಿ ಭೀಮರಾಯ ಸುರಪುರ (45), ಪತ್ನಿ ಶಾಂತಮ್ಮ (36), ಮಕ್ಕಳಾದ ಸುಮಿತ್ರಾ (12), ಶ್ರೀದೇವಿ (12), ಲಕ್ಷ್ಮಿ (8), ಶಿವರಾಜ್ (9) ಹಾಗೂ ಲಕ್ಷ್ಮೀ (4) ಮೃತ ದುರ್ದೈವಿಗಳು ಎಂದು ಗರುತಿಸಲಾಗಿದೆ. ನಾಲ್ಕು ವರ್ಷದ ಕಂದಮಮ್ಮನ್ನು ಸಹ ಕೃಷಿ ಹೊಂಡಕ್ಕೆ ತಳ್ಳಲಾಗಿದೆ. ಇನ್ನು ಶಹಾಪುರ
ಅಗ್ನಿ ಶಾಮಕದಳ ಹಾಗೂ ಗ್ರಾಮದ ನುರಿತ ಈಜುಗಾರರಿಂದ ಶವಪತ್ತೆ ಮಾಡಲಾಗಿದೆ. ಮೇಲ್ನೋಟಕ್ಕೆ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ನಂತರ ಸಂತ್ಯಾಂಶ ಹೊರ ಬರಲಿದೆ’


ನಿಮ್ಮ ಕಾಮೆಂಟ್ ಬರೆಯಿರಿ