
ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಮನೆಗಳ್ಳತನ ಮತ್ತಿತರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 19 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜನವಸತಿ ಇರದ ಮನೆಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಜಿಲ್ಲೆಯ ವಿವಿಧೆಡೆ ಕಳ್ಳತನ ನಡೆಸುತ್ತಿದ್ದ ತಂಡವನ್ನು ಬಂಧಿಸಿರುವ ಪೊಲೀಸರು ಒಂಟಿ ಮನೆಗಳ ಜನರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮದ ಪ್ರಶಾಂತ ಕಿಶೋರ ನಾಯ್ಕ (23)
ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (22) ಕೇಣಿಯ ರಾಹುಲ್ ಕೃಷ್ಣಾನಂದ ಬಂಟ (22) ಶಿರಕುಳಿಯ ಗಣೇಶ ಮಾರುತಿ ನಾಯ್ಕ (24), ಶಿರಸಿ ತಾಲೂಕಿನ ಕಸ್ತೂರ್ಬಾ ನಗರ ನಿವಾಸಿಗಳಾದ ಶ್ರೀಕಾಂತ ಗಣಪತಿ ದೇವಾಡಿಗ (27) ನಿಹಾಲ ಗೋಪಾಲಕೃಷ್ಣ ದೇವಳಿ (26) ಸಂದೀಪ ಹನುಮಂತ ಮರಾಠಿ (25) ಬಂಧಿತರು.
ಇತ್ತೀಚಿಗೆ ಗೋಕರ್ಣ, ಅಂಕೋಲಾ ಹಾಗೂ ಕಾರವಾರಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಕಳ್ಳತನ ಪ್ರಕರಣಗಳು ನಡೆದಿದ್ದವು. ಕಳ್ಳರ ಪತ್ತೆ ಕಾರ್ಯ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಕೊನೆಗೂ ಜಾಲಬೇದಿಸಿದ ಪೊಲೀಸರು ಕಳ್ಳರ ತಂಡವನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಯುವಕರು ಕದ್ದು ತಂದ ಬಂಗಾರ ಮತ್ತು ಆಭರಣಗಳನ್ನು ಖರೀದಿಸುತ್ತಿದ್ದ ಶಿರಸಿ ಬನವಾಸಿ ರಸ್ತೆಯ ಅಶೋಕ ರಾಯ್ಕರ್ (40) ಎಂಬವರನ್ನು ಸಹ ಬಂಧಿಸಲಾಗಿದೆ.
ಬಂಧಿತರು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು ಸೇರಿದಂತೆ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು ಆರೋಪಿಗಳಿಂದ 351 ಗ್ರಾಂ ಬಂಗಾರದ ಆಭರಣ, 1 ಕೆ.ಜಿ ಬೆಳ್ಳಿ ಆಭರಣ, 5 ಗ್ಯಾಸ್ ಸಿಲೆಂಡರ್ , 8 ಮೊಬೈಲ್ ಪೋನ್ ಗಳು ,3 ಬೈಕುಗಳು ಸೇರಿ ಸೇರಿದಂತೆ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಲಕರಾದ ಪ್ರಶಾಂತ್ ಕಿಶೋರ ನಾಯ್ಕ (23 ವರ್ಷ) ಬಬ್ರುವಾಡ, ಅಂಕೋಲಾ. ಹರ್ಷಾ ತಂದೆ ನಾಗೇಂದ್ರ ನಾಯ್ಕ (22 ವರ್ಷ), ತೆಂಕಣಕೇರಿ, ಅಂಕೋಲಾ, ಶ್ರೀಕಾಂತ್ ಗಣಪತಿ ದೇವಾಡಿಗ, (27 ವರ್ಷ), ಕಸ್ತೂರಬಾ ನಗರ, ಶಿರಸಿ, ನಿಹಾಲ ಗೋಪಾಲಕೃಷ್ಣ ದೇವಳಿ (26 ವರ್ಷ) ಕಸ್ತೂರಬಾ ನಗರ, ಶಿರಸಿ, ಸಂದೀಪ ಹನುಮಂತ ಮರಾಠೆ, (25 ವರ್ಷ), ಲಂಡಕನಳ್ಳಿ, ದೊಡ್ನಳ್ಳಿ ರಸ್ತೆ, ಶಿರಸಿ, ಗಣೇಶ ಮಾರುತಿ ನಾಯ್ಕ (24 ವರ್ಷ) ಶಿರಕುಳಿ, ಅಂಕೋಲಾ. ರಾಹುಲ್ ಕೃಷ್ಣಾನಂದ ಬಂಟ್ (22 ವರ್ಷ) ಕೇಣಿ, ಅಂಕೋಲಾ ಹಾಗೂ ಇವರು ಕಳ್ಳತನ ಮಾಡಿದ್ದ ಬಂಗಾರ ಖರೀದಿ ಮಾಡುತ್ತಿದ್ದ ಅಶೋಕ ಗಣಪತಿ ರಾಯ್ಕರ(42 ವರ್ಷ) ಅರೆಕಪ್ಪ, ಬನವಾಸಿ ರಸ್ತೆ ,ಶಿರಸಿ ಇವರನ್ನು ಬಂಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಾಧೀಕ್ಷಕರು ಭಟ್ಕಳ ಉಪ ವಿಭಾಗದ ಬೆಳ್ಳಿಯಪ್ಪ ಕೆ.ಯು, ಕುಮಟಾ ವೃತ್ತ ನಿರೀಕ್ಷಕ ಶಿವಪ್ರಕಾಶ ಆರ್ ನಾಯ್ಕ, ಗೋಕರ್ಣ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಎಸ್. ನಾಯ್ಕ, ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣಕುಮಾರ್, ಎಎಸ್ಐಗಳಾದ ಅರವಿಂದ ಶೆಟ್ಟಿ, ನಾರಾಯಣ ಗುನಗಿ, ರಾಜು ಜೆ ಆಗೇರ, ಪೊಲೀಸ್ ಸಿಬ್ಬಂದಿ ರಾಜೇಶ ಹೆಚ್. ನಾಯ್ಕ, ಸಚಿನ್ ಜಿ. ನಾಯ್ಕ, ಗೋರಕನಾಥ ರಾಣೆ, ಕಿರಣಕುಮಾರ್ ಬಾಳೂರ, ನಾಗರಾಜ ಪಟಗಾರ, ರಾಜು ನಾಯ್ಕ, ಅರುಣ ನಾಯ್ಕ, ನಾಗರಾಜ ನಾಯ್ಕ,, ವಿನಯ ಗೌಡ, ಜಗದೀಶ ನಾಯಕ, ಅನುರಾಜ ನಾಯ್ಕ, ಸಂಜೀವ ನಾಯ್ಕ, ಅರುಣ ಮುಕ್ಕಣ್ಣನವರ, ಶಿವಾನಂದ ಗೌಡ, ಅಮಿತ ಸಾವಂತ್, ವಸಂತ ನಾಯ್ಕ, ರವಿ ಹಾಡಕರ, ಮಹೇಶ ನಾಯ್ಕ, ರಾಮಯ್ಯ ನಾಯ್ಕ, ರಾಜು ಮಾಳಿ, ಉದಯ ತಾಂಡೇಲ ಮತ್ತು ಅಂಕೋಲಾ ಪೊಲೀಸ್ ಠಾಣೆಯ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕೆ ಹಾಗೂ ತಾಂತ್ರಿಕ ವಿಭಾಗ, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ ನಾಯ್ಕ, ಸುಧೀರ ಮಡಿವಾಳ ರವರು ಪಾಲ್ಗೊಂಡಿದ್ದರು.
ಇವರ ಪತ್ತೆ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ