ಆನ್‌ಲೈನ್ ತರಗತಿ ಫೋನ್ ಗಾಗಿ ಪುಟ್ಟ ಹುಡುಗಿಯಿಂದ ಬೀದಿಯಲ್ಲಿ ಮಾವಿನಹಣ್ಣು ಮಾರಾಟ.. 12 ಮಾವಿನಹಣ್ಣಿಗೆ ಬಂತು 1.2 ಲಕ್ಷ ರೂ.

ಜಮ್ಶೆಡ್ಪುರ: ಜಮ್‌ಶೆಡ್‌ಪುರದ 11 ವರ್ಷದ ಬಾಲಕಿಯೊಬ್ಬಳು ಫೋನ್ ಖರೀದಿಸಲು ಹಣವಿಲ್ಲದ ಕಾರಣ ತನ್ನ ಆನ್‌ಲೈನ್‌ ಕಲಿಕೆಗೆ ಬೇಕಾದ ಸ್ಮಾರ್ಟ್‌ ಫೋನ್‌ ಖರೀದಿಸಲು ಬೇಕಾದ ಹಣ ಸಂಪಾದಿಸಲು ಬೀದಿಯಲ್ಲಿ ಮಾವಿನಹಣ್ಣು ಮಾರುತ್ತಿರುವ ವಿಡಿಯೋ ವೈರಲ್ ಆದ ನಂತರ ಆಕೆಯ ಕಲಿಯುವ ಇಚ್ಛಾಶಕ್ತಿಗೆ ಅದರ ಹತ್ತುಪಟ್ಟು ಹಣ ಅವಳ ಬಳಿಯೇ ಬಂದಿದೆ.
ಹತ್ತು ಮಾವಿನ ಹಣ್ಣುಗಳಿಗೆ 1.2 ಲಕ್ಷ ರೂ. ಹೇಗೆ ಪಡೆದಳು..? ಕಲಿಯಬೇಕು ಎಂಬ ಇಚ್ಛಾಶಕ್ತಿಗೆ ಹಣವೇ ಅವಳ ಬಳಿ ಬಂತು. ಅದು ಹೇಗೆ ಎಂಬುದು ಇಲ್ಲಿದೆ..
ತುಳಸಿದೇವಿ ಎಂಬ 11 ವರ್ಷದ ಬಾಲಕಿಗೆ ಹಣಕಾಸಿನ ತೊಂದರೆಯಿಂದಾಗಿ ಮೊಬೈಲ್‌ ಪಡೆಯಲು ಸಾಧ್ಯವಾಗದೆ ಆನ್‌ಲೈನ್‌ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಮನೆಯವರ ಬಳಿ ಈ ಕೋವಿಡ್‌ ಕಷ್ಟಕಾದಲ್ಲಿ ಹಣವೂ ಇರಲಿಲ್ಲ. ಆದರೆ ಈ ಪುಟ್ಟ ಬಾಲಕಿ ಧೃತಿಗೆಡಲಿಲ್ಲ. ಆನ್‌ಲೈನ್‌ ತರಗತಿಗೆ ಬೇಕಾದ ಸ್ಮಾರ್ಟ್‌ಫೋನಿಗೆ ಬೇಕಾದ ಹಣ ತಾನೇ ಹೊಂದಿಸಲು ನಿರ್ಧರಿಸಿದಳು. ಆಗ ಅವಳಿಗೆ ಹೊಳೆದದ್ದು ಬೀದಿಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡುವುದು. ಹಣ ಸಂಪಾದಿಸಲು ಬೀದಿಯಲ್ಲಿ ಮಾವಿನಹಣ್ಣಿನ ಮಾರಾಟವನ್ನು ಆಶ್ರಯಿಸಿದಳು. ಈ ಪುಟ್ಟ ಹುಡುಗಿ ಬೀದಿಯಲ್ಲಿ ಕುಳಿತು ಮಾವಿನಹಣ್ಣು ವ್ಯಾಪಾರ ಮಾಡುತ್ತಿದ್ದ ವಿಡಿಯೋ ಸಾಮಾಜಕ ಜಾಲತಾಣದಲ್ಲಿ ವೈರಲ್‌ ಆಯಿತು.
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ನೋವನ್ನು ಸಹಿಸಲು ತನ್ನಿಂದ ಸಾಧ್ಯವಾಗಲಿಲ್ಲ ಆದ್ದರಿಂದ ಮಾವಿನಹಣ್ಣನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಅದರಿಂದ ಬಂದ ಹಣದಿಂದ ಸ್ಮಾರ್ಟ್‌ಫೋನ್ ಖರೀದಿಸಿ ತನ್ನ ಅಧ್ಯಯನವನ್ನು ಮುಂದುವರಿಸಬಹುದು ಎಂಬ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದೇನೆ ಎಂದು ತುಳಸಿ ಈ ವೈರಲ್‌ ಆದ ವಿಡಿಯೊದಲ್ಲಿ ಹೇಳಿದ್ದಳು.
ಈ ವೈರಲ್ ವಿಡಿಯೋ ಮುಂಬೈ ಮೂಲದ ವ್ಯಾಲ್ಯೂಯಬಲ್ ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಗಮನ ಸೆಳೆಯಿತು, ಕಂಪನಿ ಹುಡುಗಿಯ ನೆರವಿಗೆ ಬರಲು ನಿರ್ಧರಿಸಿತು. ಹಾಗೂ ಒಂದು ಮಾವಿನಹಣ್ಣಿಗೆ ಹತ್ತು ಸಾವಿರ ರೂ.ಗಳಿಗೆ ಡಜನ್ ಮಾವಿನಹಣ್ಣನ್ನು 1.2 ಲಕ್ಷ ರೂ.ಗೆ ಖರೀದಿಸಲು ನಿರ್ಧರಿಸಿತು.
ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಅಮೆಯಾ ಹೆಟೆ ಅವರು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬೇಕಾದ ಮೊಬೈಲ್‌ ಖರೀದಿಸಲು ತುಳಸಿ ನಡೆಸುತ್ತಿರುವ ಹೋರಾಟದ ಬಗ್ಗೆ ತಿಳಿದುಕೊಂಡರು. ತಕ್ಷಣ ಅವಳಿಗೆ ಪ್ರತಿ ಮಾವಿಗೆ 10,000 ರೂ.ನೀಡಿ 1.2 ಲಕ್ಷ ರೂ. ಕೊಟ್ಟು, ಅವಳಿಂದ ಒಂದು ಡಜನ್ ಮಾವಿನಹಣ್ಣನ್ನು ಖರೀದಿಸಿದರು.
ಬಾಲಕಿಯ ಶಿಕ್ಷಣಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ನೋಡಿಕೊಳ್ಳಲು ಅವರು 13,000 ರೂ.ಗಳಿಗೆ ಅವಳಿಗೆ ಸ್ಮಾರ್ಟ್‌ಫೋನ್ ಖರೀದಿಸಿ ವರ್ಷಪೂರ್ತಿ ಇಂಟರ್ನೆಟ್ ಸಂಪರ್ಕವನ್ನೂ ಒದಗಿಸಿದ್ದಾರೆ.
ತುಳಸಿ ತುಂಬಾ ಚಾಣಾಕ್ಷ ಮತ್ತು ಕಠಿಣ ಶ್ರಮದ ವಿದ್ಯಾರ್ಥಿ. ನಾವು ನೀಡಿದ ಸಹಾಯದಿಂದ ಅವಳು ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದರೆ ನಮಗೆ ಸಂತೋಷವಾಗುತ್ತದೆ. ಆಕೆಗೆ ಅಗತ್ಯವಿರುವಾಗ ನಾವು ಅವರಿಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತೇವೆ “ಎಂದು ನ್ಯೂಸ್ 18 ಗೆ ಅಮೆಯಾ ಹೆಟೆ ಹೇಳಿದ್ದಾರೆ.
ವಿಡಿಯೋ ವೈರಲ್‌ ಆದ ಕೆಲ ದಿನಗಳ ನಂತರ ಯಾರೋ ಮುಂಬೈನಿಂದ ಕರೆ ಮಾಡಿ 12 ಮಾವಿನಕಾಯಿಗೆ ತಲಾ 10,000 ರೂ. ಕೊಟ್ಟು ಖರೀದಿಸಿದರು. ಹಣವನ್ನು ಅವಳ ತಂದೆಯ ಖಾತೆಗೆ ವರ್ಗಾಯಿಸಲಾಯಿತು ಮತ್ತು ತುಳಸಿಗೆ ಬೋಧಕನನ್ನು ನೇಮಿಸಲಾಯಿತು ಎಂದು ಹೇಳಿದ ತುಳಸಿಯ ತಾಯಿ ಪದ್ಮಿನಿ ದೇವಿ, ‘ತುಳಸಿ ಅಧ್ಯಯನದಲ್ಲಿ ಉತ್ತಮವಾಗಿದ್ದಾಳೆ ಮತ್ತು ಅವಳು ತನ್ನ ಜೀವನದಲ್ಲಿ ಏನಾದರೂ ಸಾಧಿಸುತ್ತಾಳೆ ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿದರು.
ತುಳಸಿಯ ಪೋಷಕರು ಅವಳಿಗೆ ಉತ್ತಮವಾದದ್ದನ್ನು ಮಾತ್ರ ಬಯಸಿದ್ದರು, ಆದರೆ ಅವರ ಸಂದರ್ಭಗಳಿಂದಾಗಿ ಅದನ್ನು ಒದಗಿಸಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ, ಹೆಟೆ ಅವರ ಗೆಸ್ಚರ್ ಬಹಳ ಅಗತ್ಯವಿರುವ ಸಮಯದಲ್ಲಿ ಬಂದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ