ಮೊಬೈಲ್‌ ನೆಟ್‌ವರ್ಕ್‌ಗೆಂದು ಮರ ಹತ್ತಿದ ಹುಡುಗರು, ಸಿಡಿಲು ಬಡಿದು ಓರ್ವ ಸಾವು, ಮೂವರಿಗೆ ಗಾಯ

ಪಾಲ್ಘರ್‌: ಮೊಬೈಲ್‌ ನೆಟ್‌ವರ್ಕ್‌ಗಾಗಿ ಮರ ಹತ್ತಿದ ಸುಮಾರು 15 ವರ್ಷದ ಹುಡುಗನೊಬ್ಬ ಸಿಡಿಲಿನ ಬಡಿದು ಮೃತ ಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನಯಲ್ಲಿ ಇತರ ಮೂವರು ಹುಡುಗರು ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಪಾಲ್ಘರ್‌ನ ದಹನು ತಾಲೂಕಿನ ಮಂಕಾರ್‌ಪದ ಎಂಬಲ್ಲಿ ನಾಲ್ವರು ಹುಡುಗರು ದನ ಮೇಯಿಸಲು ಬಯಲಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ತಹಸೀಲ್ದಾರ್‌ ರಾಹುಲ್‌ ಸಾರಂಗ್‌ ತಿಳಿಸಿದ್ದಾರೆ.
ಸೋಮವಾರ ಜಿಲ್ಲೆಯಾದ್ಯಂತ ಗುಡುಗು-ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಗುಡುಗು,ಮಿಂಚು ಜೋರಿದ್ದ ಸಂದರ್ಭ ಮಕ್ಕಳು ಮೊಬೈಲ್‌ ನೆಟ್‌ವರ್ಕ್‌ ಸಿಗದ ಕಾರಣ ಮರವೇರಿದರೆ ಸಿಗಬಹುದು ಎಂದು ಮರ ಹತ್ತಿದ್ದಾರೆ. ಆದರೆ ದುರದೃಷ್ಟವಶಾತ್‌ ಸಿಡಿಲು ಮರಕ್ಕೆ ಹೊಡೆದ ಪರಿಣಾಮ ಮರಹತ್ತಿದವರ್ಲಿ ಓರ್ವ ಹುಡುಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ರವೀಂದ್ರ ಕೋರ್ಡ ಎಂದು ಗುರುತಿಸಲಾಗಿದೆ.
ಗಾಯಗೊಂಡ ಇತರ ಮೂವರು 14-16 ವಯಸ್ಸಿನವರಾಗಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ