ನ್ಯುಮೋನಿಯಾ: ಹಿರಿಯ ನಟ ನಸೀರುದ್ದೀನ್ ಷಾ ಆಸ್ಪತ್ರೆಗೆ ದಾಖಲು

ಮುಂಬೈ:ಹಿರಿಯ ಬಾಲಿವುಡ್‌ ನಟ ನಸೀರುದ್ದೀನ್ ಷಾ ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಇಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಟನ ಪತ್ನಿ ರತ್ನ ಪಾಠಕ್ ಷಾ ಬುಧವಾರ ಹೇಳಿದ್ದಾರೆ.
70 ವರ್ಷದ ನಸೀರುದ್ದೀನ್ ಷಾ ಅವರನ್ನು ಖಾರ್ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಸೀರುದ್ದೀನ್ ಷಾ ತನ್ನ ಶ್ವಾಸಕೋಶದಲ್ಲಿ ನ್ಯುಮೋನಿಯಾದ “ಸಣ್ಣ ಪ್ಯಾಚ್” ಹೊಂದಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರಿಗೆ ಸಣ್ಣ ಪ್ಯಾಚ್ ಇದೆ ಮತ್ತು ಎಲ್ಲವೂ ನಿಯಂತ್ರಣದಲ್ಲಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತದ್ದಾರೆ, ಅವರು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುತ್ತಾರೆ ಎಂದು ಭಾವಿಸುತ್ತೇವೆ” ಎಂದು ರತ್ನ ಪಾಠಕ್ ಷಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ