ಜುಲೈ ೫ ರಂದು ಧಾರವಾಡ ಜೆಎಸ್ಎಸ್ ಐಟಿಐನಲ್ಲಿ ಕ್ಯಾಂಪಸ್ ಸಂದರ್ಶನ

posted in: ರಾಜ್ಯ | 0

ಧಾರವಾಡ: ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ದಿನಾಂಕ ೦೫.೦೭.೨೦೨೧ ರಂದು ಬೆಳಿಗ್ಗೆ ೧೦ಗಂಟೆಗೆ ಬೆಂಗಳೂರಿನ ಎನ್.ಟಿ.ಟಿ.ಎಫ್ ಕಂಪನಿಯವರು ನೀಮ್ ಟ್ರೈನೀ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ.
೧೮-೨೫ ವಯೋಮಾನದೊಳಗಿನ ಐ.ಟಿ.ಐ ಉತ್ತೀರ್ಣರಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತರು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಬಯೋಡೆಟಾ, ೨ ಪೋಟೊ, ಆಧಾರ ಕಾರ್ಡಿನ ಝರಾಕ್ಸ್‌ ಪ್ರತಿ ಹಾಗೂ ಅಂಕಪಟ್ಟಿಯ ಝರಾಕ್ಸ್‌ ಪ್ರತಿಯನ್ನು ತರಬೇಕು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾವಣೆಗಾಗಿ ೦೮೩೬-೨೪೬೨೨೦೨ ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ