ಬೆಂಗಳೂರು ಈಜುಪಟು ಟೋಕಿಯೊ ಒಲಂಪಿಕ್ಸ್ ಗೆ ಆಯ್ಕೆ

ನವದೆಹಲಿ: ರೋಮ್ ಈಜು ಸ್ಪರ್ಧೆಯ 100 ಮೀಟರ್ ಬ್ಯಾಕ್‍ಸ್ಟ್ರೋಕ್ ಈಜಿನಲ್ಲಿ ಉತ್ತಮ ಸಾಧನೆ ತೋರಿದ್ದ ಭಾರತೀಯ ಈಜುಪಟು
ಶ್ರೀಹರಿ ನಟರಾಜ್ ಅವರಿಗೆ ಫಿನಾ ಸಂಸ್ಥೆ ಎ ದರ್ಜೆ ಸರ್ಟಿಫಿಕೆಟ್ ನೀಡಿರುವುದರಿಂದ ಅವರು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ರೋಮ್‍ನ ಸೆಟ್‍ಕೊಲ್ಲಿಯಲ್ಲಿ ನಡೆದಿದ್ದ ಈಜು ಸ್ಪರ್ಧೆಯಲ್ಲಿ ನಟರಾಜ್ ಅವರು 53.77 ಸೆಕೆಂಡ್‍ಗಳಲ್ಲಿ ಗುರಿಮುಟ್ಟುವಲ್ಲಿ ಯಶಸ್ವಿಯಾಗಿದ್ದರು. ಈ ಮಾನದಂಡದ ಆಧಾರದ ಮೇಲೆ ನಟರಾಜ್ ಟೋಕಿಯೊ ಒಲಂಪಿಕ್ಸ್‍ಗೆ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಈಜು ಒಕ್ಕೂಟ ಟ್ವೀಟ್ ಮಾಡಿದೆ.
ಬೆಂಗಳೂರು ಮೂಲದ ನಟರಾಜ್ ನಿಗದಿತ ಅವಧಿಯೊಳಗೆ ಗುರಿ ಮುಟ್ಟುವ ಸಾಧನೆ ಮಾಡಿ ಟೋಕಿಯೊ ಒಲಂಪಿಕ್ಸ್‌ಗೆ ಆಯ್ಕೆಯಾದರೂ ಫಿನಾ ಸಂಸ್ಥೆಯ ಒಪ್ಪಿಗೆಗೆ ಕಾಯಲಾಗುತಿತ್ತು. ಫಿನಾ ಸಂಸ್ಥೆ ನಟರಾಜ್ ಅವರಿಗೆ ಎ ದರ್ಜೆ ಸ್ಥಾನಮಾನ ನೀಡಿರುವುದರಿಂದ ಅವರ ಟೋಕಿಯೊ ಒಲಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement