ದಾಂಡೇಲಿ: ಕಾಳಿ ನದಿಯಿಂದ ಬಂದು ಗ್ರಾಮದ ರಸ್ತೆಯಲ್ಲಿ ಬೃಹತ್‌ ಮೊಸಳೆಯ ಬೆಳಗಿನ ವಾಕಿಂಗ್..!..ವಿಡಿಯೋ ನೋಡಿ

ಕಾರವಾರ:- ಆಹಾರ ಅರಸಿ ನದಿ ಭಾಗದಿಂದ ಮೊಸಳೆಯೊಂದು ಗ್ರಾಮಕ್ಕೆ ನುಗ್ಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ಗುರುವಾರ ನಡೆದಿದೆ.
ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದೆ.ಬೆಳ್ಳಂಬೆಳಗ್ಗೆ ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು ನೋಡಿದ ಗ್ರಾಮದ ಜನರು ಬೆಚ್ವಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆದರೆ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ.
ದಾಂಡೇಲಿಯ ಕಾಳಿ ನದಿಯಲ್ಲಿ ನೂರಾರು ಮೊಸಳೆಗಳು ವಾಸವಾಗಿವೆ. ಆದರೇ ನದಿಯನ್ನು ಬಿಟ್ಟು ಗ್ರಾಮಕ್ಕೆ ಬಂದಿದ್ದು ಇಲ್ಲ. ಇದೇ ಮೊದಲಬಾರಿ ಮೊಸಳೆ ಆಗಮಿಸಿದ್ದರಿಂದ ಜನರು ಗಾಬರಿಯಾಗಿದ್ದಾರೆ.
ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು ಲಾಕ್ ಡೌನ್ ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತ್ತಿದ್ದು, ಗುರುವಾರ ರಸ್ತೆಗೂ ಬಂದಿದೆ.

4.8 / 5. 8

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement