ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕ್ಷೇತ್ರಗಳ ಮೀಸಲಾತಿ ಪ್ರಕಟ

ಕಾರವಾರ:ಕೊರೊನಾ ಎರಡನೇ ಅಲೆ ಮುಕ್ತಾಯದ ಹಂತದಲ್ಲಿರುವಾಗಲೇ ಉತ್ತರ ಕನ್ನಡ ಜಿಲ್ಲಾ ಪಂಚಾಯತ  ಕ್ಷೇತ್ರಗಳ ಮುಂದೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಕರಡು ಅಧಿಸೂಚನೆಯನ್ನು ಸರಕಾರವು ಪ್ರಕಟಿಸಿದ್ದು ಜುಲೈ ೭ ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಾರವಾರ ತಾಲೂಕಿನ ಚಿತ್ತಾಕುಲದ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ವಿರ್ಜೆ (ಮಲ್ಲಾಪುರ)ಗೆ ಸಾಮಾನ್ಯ ಮಹಿಳೆ ಹಾಗೂ ಅಮದಳ್ಳಿ (ಚೆಂಡಿಯಾ)ಗೆ ಅನುಸೂಚಿತ ಜಾತಿ, ಜೋಯಿಡಾ ತಾಲೂಕಿನ ರಾಮಮನಗರಕ್ಕೆ ಸಾಮಾನ್ಯ ಮಹಿಳೆ, ಜೊಯಿಡಾಗೆ ಹಿಂದುಳಿದ ವರ್ಗಬ ಮಹಿಳೆ, ತೇರಗಾಂವಕ್ಕೆ ಸಾಮಾನ್ಯ ಮಹಿಳೆ, ಹಳಿಯಾಳ ತಲೂಕಿನ ಬೆಳವಟಿಗೆ (ಮುರ್ಕವಾಡ)ಗೆ ಅನುಸೂಚಿತ ಜಾತಿ ಮಹಿಳೆ, ಕಾವಲವಾಡಕ್ಕೆ ಹಿಂದುಳಿದ ವರ್ಗ ಅ, ದಾಂಡೇಲಿ ತಾಲೂಕಿನ ಅಂಬಿಕಾನಗರಕ್ಕೆ ಸಾಮಾನ್ಯ,
ಭಟ್ಕಳ ತಾಲೂಕಿನ ಮಾವಳ್ಳಿಗೆ ಹಿಂದುಳಿದ ವರ್ಗ ಅ ಮಹಿಳೆ, ಶಿರಾಲಿಗೆ ಸಾಮಾನ್ಯ, ಹೆಬಳೆಗೆ ಹಿಂದುಳಿದ ವರ್ಗ ಅ, ಬೆಳಕೆಗೆ ಸಾಮಾನ್ಯ ಮಹಿಳೆ, ಹೊನ್ನಾವರ ತಾಲೂಕಿನ ಹಳದೀಪುರಕ್ಕೆ ಸಾಮಾನ್ಯ ಮಹಿಳೆ, ಸಾಲಕೋಡ (ಮುಗ್ವಾ)ಕ್ಕೆ ಸಾಮಾನ್ಯ, ಖರ್ವಾ (ಮಾವಿನಕುರ್ವಾ)ಗೆ ಹಿಂದುಳಿದ ವರ್ಗ, ನಗರಬಸ್ತಿಕೇರಿಗೆ ಸಾಮಾನ್ಯ, ಕಾಸರಕೋಡಕ್ಕೆ ಸಾಮಾನ್ಯ ಮಹಿಳೆ, ಶಿರಸಿ ತಾಲೂಕಿನ ಬನವಾಸಿಗೆ ಸಾಮಾನ್ಯ, ಬದನಗೋಡಕ್ಕೆ ಸಾಮಾನ್ಯ ಮಹಿಳೆ, ಹುತ್ತಗಾರ (ಹುಲೇಕಲ್)ಕ್ಕೆ ಸಾಮಾನ್ಯ ಮಹಿಳೆ, ಶಿವಳ್ಳಿ-ಹೆಗಡೆಕಟ್ಟಾ (ಜಾನ್ಮನೆ)ಗೆ ಸಾಮಾನ್ಯ , ಬಚಗಾಂವ (ದೊಡ್ನಳ್ಳಿ)ಗೆ ಹಿಂದುಳಿದ ವರ್ಗ ಇಂದೂರಿಗೆ ಸಾಮಾನ್ಯ, ಮೈನಳ್ಳಿ (ಚಿಗಳ್ಳಿ)ಗೆ ಹಿಂದುಳಿದ ವರ್ಗ ಅ ಮಹಿಳೆ,
ಮುಂಡಗೋಡ ತಾಲೂಕಿನ ಪಾಳಾಗೆ ಹಿಂದುಳಿದ ವರ್ಗ ಅ ಮಹಿಳೆ, ಯಲ್ಲಾಪುರ ತಾಲೂಕಿನ ಮಾವಿನಮನೆ (ಇಡಗುಂದಿ)ಗೆ ಸಾಮಾನ್ಯ , ಕಂಪ್ಲಿಗೆ ಅನುಸೂಚಿತ ಪಂಗಡ ಮಹಿಳೆ, ಕಿರವತ್ತಿಗೆ ಹಿಂದುಳಿದ ವರ್ಗ ಅ ಮಹಿಳೆ, ಸಿದ್ದಾಪುರ ತಾಲೂಕಿನ ಅಣಲೇಬೈಲ್‌ಗೆ ಹಿಂದುಳಿದ ವರ್ಗ ಅ ಮಹಿಳೆ, ಕಾನಗೋಡ (ದೊಡ್ಮನೆ)ಕ್ಕೆ ಅನುಸೂಚಿತ ಜಾತಿ ಮಹಿಳೆ, ಶಿರಳಗಿ (ಹಲಗೇರಿ)ಗೆ ಸಾಮಾನ್ಯ, ಕುಮಟಾ ತಾಲೂಕಿನ ಗೋಕರ್ಣಕ್ಕೆ ಹಿಂದುಳಿದ ವರ್ಗ ಬ, ಮಿರ್ಜಾನಕ್ಕೆ ಸಾಮಾನ್ಯ, ಹೆಗಡೆಗೆ ಸಾಮಾನ್ಯ, ದೀವಗಿ (ಮೂರುರು)ಗೆ ಸಾಮಾನ್ಯ ಮಹಿಳೆ, ಅಂಕೋಲಾ ತಾಲೂಕಿನ ಕಲಭಾಗ (ದೇವಗಿರಿ)ಕ್ಕೆ ಸಾಮಾನ್ಯ, ಭಾವಿಕೇರಿ (ಅವರ್ಸಾ)ಗೆ ಸಾಮಾನ್ಯ, ಬೆಳಸೆ (ಅಗಸೂರು)ಗೆ ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಬೆಳಂಬಾರ (ಶೆಟಗೇರಿ)ಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ನಿಗದಿಸಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement