ಕರ್ನಾಟಕದಲ್ಲಿ ದೇವಾಲಯ’ ಓಪನ್: ದೇವರ ದರ್ಶನ, ಆರತಿಗಷ್ಟೇ ಸೀಮಿತ

ಬೆಂಗಳೂರು : ಕೊರೊನಾ ಮಾರ್ಗಸೂಚಿ ಪಾಲಿಸುವ ಷರತ್ತಿಗೊಳಪಟ್ಟು ಜುಲೈ 5 ರಿಂದ ರಾಜ್ಯಾದ್ಯಂತ ‘ದೇವಾಲಯ’ ತೆರೆಯಲು ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಈ ಮಾರ್ಗಸೂಚಿ ಕ್ರಮದಂತೆ ರಾಜ್ಯದಲ್ಲಿ ಮತ್ತಷ್ಟು ಚಟುವಟಿಕೆಗಳಿಗೆ ರಿಲೀಫ್ ನೀಡಲಾಗಿದೆ, ಅಂತೆಯೇ ದೇವಾಲಯ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಧಾರ್ಮಿಕ ದತ್ತಿ ಇಲಾಖೆಯಿಂದಲೂ ಆದೇಶ ಹೊರಡಿಸಲಾಗಿದ್ದು, ಜುಲೈ 5 ರಿಂದ ರಾಜ್ಯಾದ್ಯಂತ ‘ದೇವಾಲಯ’ ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಆದರೆ ದೇವಾಲಯದಲ್ಲಿ ಭಕ್ತರಿಗೆ ದೇವರ ದರ್ಶನ, ಆರತಿಗಷ್ಟೇ ಸೀಮಿತವಾಗಿದ್ದು, ಯಾವುದೇ ವಿಶೇಷ ಪೂಜೆ, ವಿಶೇಷ ಸೇವೆಗೆ ಅವಕಾಶ ನೀಡಿಲ್ಲ. ಭಕ್ತರು ದೇವಾಲಯದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement