ಜನ್ಮದಿನದ ಬಲೂನ್ ತೆಗೆಯಿತು ವ್ಯಕ್ತಿಯೊಬ್ಬನ ಪ್ರಾಣ

posted in: ರಾಜ್ಯ | 0

ಬೆಂಗಳೂರು: ಇಲ್ಲಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಲೂನ್​​​ ಸಿಡಿದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಬರ್ತ್​ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸ್ಪೋಟ ಸಂಭವಿಸಿದೆ. ಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಮೃತಪಟ್ಟಿದ್ದಾರೆ. ಅಶೋಕನಗರದ ಅಪಾರ್ಟ್​​ಮೆಂಟ್​​ ಆವರಣದಲ್ಲಿ ಈ ಘಟನೆ ನಡೆದಿದೆ.
ಗ್ಯಾಸ್​ ಮೂಲಕ ಬಲೂನ್​​ ಫಿಲ್​ ಮಾಡುತ್ತಿದ್ದಾಗ ಭಯಾನಕ ಸ್ಫೋಟ ಸಂಭವಿಸಿದೆ. ಬರ್ತ್​​​​ಗೆ ಪಾರ್ಟಿಗಳಿಗೆ ಬಲೂನ್​​​​ ಒದಗಿಸುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ (19) ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ದಿನೇಶ್ ಬರ್ತ್​ ಡೇ ಕಾರ್ಯಕ್ರಮಕ್ಕೆ ಬಲೂನ್ ಗ್ಯಾಸ್ ಸಹಿತ ಬೈಕ್ ನಲ್ಲಿ ಸಹಾಯಕ ಮಹದೇಶ್ ಜೊತೆಗೆ ಅಶೋಕನಗರದ ಅಪಾರ್ಟ್​ಮೆಂಟ್​ಗೆ ಆಗಮಿಸಿದ್ದರು.
ಅಪಾರ್ಟ್‌ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದರು. ಈ ವೇಳೆ ಜೊತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ. ಕೆಲವೇ ಕ್ಷಣಗಳಲ್ಲಿ ದಿನೇಶ್​ ಒಬ್ಬರೇ ಬಲೂನ್ ಫಿಲ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ದಿನೇಶ್​ ಕೈ-ಕಾಲು, ದೇಹ ಛಿದ್ರಗೊಂಡಿದೆ.
ಫ್ಲ್ಯಾಟ್ ನಿವಾಸಿ, ಮನೆಯಲ್ಲಿ ಬರ್ತಡೇ ಪಾರ್ಟಿಗೆ ಬಲೂನ್​ ಡಿಸೈನ್​ ಆರ್ಡರ್​ ಮಾಡಿದ್ದರು. ಒಟ್ಟು 200 ಬಲೂನ್ ಗಳನ್ನು ತಯಾರಿಸಲು ತಿಳಿಸಿದ್ದರು. ಅದರಂತೆ ನೂರು ಬಲೂನ್ ಮಾಡಿ ಕಳುಹಿಸಲಾಗಿತ್ತು. ಉಳಿದ‌ ನೂರು ಬಲೂನ್​​ಗಳನ್ನು ತಯಾರಿಸುತಿದ್ದ ವೇಳೆ ಅವಘಡ ನಡೆಸಿದೆ.
ಮೃತ ದಿನೇಶ್​​ ಕಳೆದ ನಾಲ್ಕು ವರ್ಷಗಳಿಂದ ಬಲೂನ್ ಕೆಲಸ ಮಾಡುತ್ತಿದ್ದರು. ಆನ್ ಲೈನ್ ಮುಖಾಂತರ ಸಿಕ್ಕ ಆರ್ಡರ್​​​​ಗೆ ಬಲೂನ್ ತಯಾರಿಕೆ ಮಾಡುತ್ತಿದ್ದರು. ಕೃತಕ ರಾಸಾಯನಿಕಗಳನ್ನು ಬಳಸಿ ಸಿಲಿಂಡರ್ ತಯಾರಿಸಿಕೊಂಡಿದ್ದರು. ಅದರ ಮೂಲಕ ಬಲೂನ್ ಫಿಲ್ಲಿಂಗ್ ಮಾಡುತಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ