ಜಮ್ಮು ಡ್ರೋನ್‌ ದಾಳಿ: ಶ್ರೀನಗರದಲ್ಲಿ ಚಾಲಕ ರಹಿತ ವಿಮಾನಗಳಿಗೆ ನಿಷೇಧ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಡ್ರೋನ್‌, ಚಾಲಕ ರಹಿತ ವಿಮಾನ ಹೊಂದುವುದು, ಮಾರಾಟ ಮಾಡುವುದು ಮತ್ತು ಬಳಕೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.
ವಾರದ ಹಿಂದೆ ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋನ್‌ ದಾಳಿಯಿಂದ ಇಬ್ಬರು ವಾಯಪಡೆಯ ಸಿಬ್ಬಂದಿ ಗಾಯಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ವೈಮಾನಿಕ ಪ್ರದೇಶ ಮತ್ತು ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಡ್ರೋನ್‌ನಂತಹ ಹಾರಾಟದ ವಾಹನಗಳನ್ನು ನಿರ್ಬಂಧಿಸಲಾಗಿದೆ. ಸಭೆ, ಸಮಾರಂಭಗಳಲ್ಲಿ ದುರ್ಘಟನೆಗಳು ಸಂಭವಿಸದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮೊಹಮ್ಮದ್‌ ಐಜಾಜ್‌ ಹೇಳಿದ್ದಾರೆ.
ಡ್ರೋನ್‌ ಕ್ಯಾಮರಾಗಳು ಸೇರಿದಂತೆ ಚಾಲಕ ರಹಿತ ವಿಮಾನಗಳನ್ನು ಹೊಂದಿರುವವರು ಅದನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ತಂದು ಒಪ್ಪಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಸೇವೆಯಲ್ಲಿರುವ ನಕ್ಷೆ ಸೂಚಕ, ಕೃಷಿ ಸಮೀಕ್ಷೆ, ಹವಾಮಾನ ಸಮೀಕ್ಷೆ ಮತ್ತಿತರ ಕೆಲಸಗಳಿಗೆ ಬಳಕೆ ಮಾಡುವ ಡ್ರೋನ್‌ಗಳಿಗೆ ನಿರ್ಬಂಧವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಮ್ಮು ದಾಳಿಯ ನಂತರ ರಜೌರಿ, ಕಥುವಾ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತವು ಡ್ರೋನ್‌ಗಳ ಮೇಲೆ ನಿಷೇಧ ಹೇರಿತ್ತು.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement