ಕಟ್ಟುನಿಟ್ಟಾದ ಲಾಕ್‌ಡೌನ್ ಹೊರತಾಗಿಯೂ ಈ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯಕ್ಕೆ 55.41% ಹೆಚ್ಚಿನ ಅಬಕಾರಿ ಆದಾಯ..!

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಸೋಂಕಿನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಸಮಯದಲ್ಲಿ ಕೆಲವು ಗಂಟೆಗಳ ಕಾಲ ಮದ್ಯದಂಗಡಿಗಳನ್ನು ತೆರೆದಿರುವುದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆರ್ಥಿಕ ಕುಸಿತದ ನಡುವೆ ಗಮನಾರ್ಹ ಪ್ರಮಾಣದ ಆದಾಯವನ್ನು ಗಳಿಸಲು ಸಹಾಯ ಮಾಡಿದೆ.
2020-21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯವು 2,122.90 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸಿದೆ.
ಮೊದಲ ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ 2020 ರಲ್ಲಿ ಮಾರ್ಚ್ 22 ರಿಂದ ಮೇ 4 ರವರೆಗೆ ಮದ್ಯದಂಗಡಿಗಳನ್ನು ಮುಚ್ಚಲಾಯಿತು. ಆದಾಗ್ಯೂ, ಈ ವರ್ಷದ ಏಪ್ರಿಲ್ 28 ರಿಂದ ಲಾಕ್‌ಡೌನ್‌ ಸಮಯದಲ್ಲಿ ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಪಬ್‌ಗಳು ಮುಚ್ಚಲ್ಪಟ್ಟಿವೆ. ಆದರೆ ಪಾರ್ಸೆಲ್‌ಗೆ ಅವಕಾಶ ನೀಡಲಾಗಿತ್ತು. ಜುಲೈ 5 ರಿಂದ, ಮದ್ಯದ ಪರವಾನಗಿ ಹೊಂದಿರುವ ರೆಸ್ಟೋರೆಂಟ್‌ಗಳಿಗೆ ಮಾತ್ರ ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ.
2,122.90 ಕೋಟಿ ರೂ.ಗಳ ಈ ವ್ಯತ್ಯಾಸವು ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 55.41% ಅಬಕಾರಿ ಆದಾಯವನ್ನು ಹೆಚ್ಚಿಸಿದೆ. ಈ ವರ್ಷ ಮಾರಾಟವಾದ ಭಾರತೀಯ ನಿರ್ಮಿತ ಮದ್ಯದ 1.76 ಕೋಟಿ ಕೇಸ್ ಪೆಟ್ಟಿಗೆಗಳಿಗೆ ಹೋಲಿಸಿದರೆ, 1.54 ಕೋಟಿ ಕೇಸ್ ಪೆಟ್ಟಿಗೆಗಳು ಹಿಂದಿನ ವರ್ಷ ಇದೇ ಸಮಸಯದಲ್ಲಿ ಮಾರಾಟವಾಗಿವೆ. ಅದೇ ರೀತಿ ಬಿಯರ್‌ಗೆ ಸಂಬಂಧಿಸಿದಂತೆ, ಈ ವರ್ಷ ಏಪ್ರಿಲ್-ಜೂನ್‌ನಲ್ಲಿ 45.38 ಲಕ್ಷ ಕೇಸ್ ಬಾಕ್ಸ್‌ಗಳ ಮಾರಾಟ ಕಂಡುಬಂದಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 33.83 ಲಕ್ಷ ಕೇಸ್ ಬಾಕ್ಸ್‌ಗಳು ಮಾರಾಟವಾಗಿವೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ, ರಾಜ್ಯವು 5,954.07 ಕೋಟಿ ರೂ.ಗಳ ಅಬಕಾರಿ ಆದಾಯವನ್ನು ವರ್ಷದ ಬಜೆಟ್ ಅಂದಾಜಿನ 24.22% ಗಳಿಸಿದೆ. 2020-21ರಲ್ಲಿ, ರಾಜ್ಯವು ಇದೇ ಅವಧಿಯಲ್ಲಿ ಅಬಕಾರಿ ಆದಾಯದಲ್ಲಿ 3,831.17 ಕೋಟಿ ರೂ. ಗಳಿಸಿತ್ತು.
ಕಟ್ಟುನಿಟ್ಟಾದ ಲಾಕ್‌ಡೌನ್ ಹೊರತಾಗಿಯೂ, ಕರ್ನಾಟಕವು 2021-22ರ ಮೊದಲ ತ್ರೈಮಾಸಿಕದಲ್ಲಿ 55.41% ಹೆಚ್ಚಿನ ಅಬಕಾರಿ ಆದಾಯವನ್ನು ಗಳಿಸಿದೆ
ಆದಾಗ್ಯೂ, ಅಂದಾಜಿನ ಆದಾಯದ ಹೆಚ್ಚುವರಿ ಮೊತ್ತದೊಂದಿಗೆ ರಾಜ್ಯವು ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಕೊರತೆಗಳನ್ನು ಮರುಪಡೆಯಿತು. ಬಜೆಟ್ ಅಂದಾಜು 22,700 ಕೋಟಿ ರೂ.ಗಳಾಗಿದ್ದರೆ, ರಾಜ್ಯವು 23,332.10 ಕೋಟಿ ರೂ.ಆದಾಯ ಪಡೆಯಿತು. ಈ ವರ್ಷದ ಬಜೆಟ್‌ನಲ್ಲಿ, ಗುರಿಯನ್ನು 24,580 ಕೋಟಿ ರೂ.ಗಳಿಗೆ ನಿಗದಿ ಪಡಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಳಗಾವಿ; ಟಿಕೆಟ್​ ತೋರಿಸು ಎಂದಿದ್ದಕ್ಕೆ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಮುಸುಕುಧಾರಿಯಿಂದ ಹಲ್ಲೆ, ಓರ್ವ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement