ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ಭಾರತದ ಅಗ್ರ ಏಳು ನಗರಗಳಲ್ಲಿ ಮನೆ ಮಾರಾಟದಲ್ಲಿ ಶೇ.23 ರಷ್ಟು ಹೆಚ್ಚಳ: ವರದಿ

ಮುಂಬೈ: 2021ರ ಮೊದಲ ಐದು ತಿಂಗಳಲ್ಲಿ ದೇಶದ ಅಗ್ರ ಏಳು ನಗರಗಳಲ್ಲಿ ಮನೆ ಮಾರಾಟವು ಶೇಕಡಾ 23 ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಕೋಲ್ಕತ್ತಾದಲ್ಲಿ ಇದೇ ಅವಧಿಯಲ್ಲಿ ಶೇಕಡಾ 11 ರಷ್ಟು ಕುಸಿತ ಕಂಡಿದೆ ಎಂದು ಪ್ರಾಪ್ ಎಕ್ವಿಟಿ ಬಿಡುಗಡೆ ಮಾಡಿದ ವರದಿಯಲ್ಲಿ ತೋರಿಸಲಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಪುಣೆ ಕಳೆದ ವರ್ಷಕ್ಕಿಂತ 2021 ರ ಮೊದಲ ಐದು ತಿಂಗಳಲ್ಲಿ ಮನೆ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ. ಬೆಂಗಳೂರಿನಲ್ಲಿ ಮಾರಾಟವು ಶೇಕಡಾ 16 ರಷ್ಟು ಏರಿಕೆಯಾದರೆ, ಚೆನ್ನೈ ಮಾರಾಟದಲ್ಲಿ ಶೇ 40 ರಷ್ಟು ಬೆಳವಣಿಗೆ ದಾಖಲಿಸಿದೆ. ಹೈದರಾಬಾದ್ ಮನೆ ಮಾರಾಟವು ಶೇಕಡಾ 39 ರಷ್ಟು ಏರಿಕೆಯಾದರೆ, ಮುಂಬೈನಲ್ಲಿ ಶೇ 29 ರಷ್ಟು ಮತ್ತು ಪುಣೆಯಲ್ಲಿ ಶೇ 34 ರಷ್ಟು ಏರಿಕೆಯಾಗಿದೆ.
ಒಟ್ಟಾರೆಯಾಗಿ, 2020 ರ ಮೊದಲ ಐದು ತಿಂಗಳಲ್ಲಿ ಮನೆ ಮಾರಾಟವು ಮೊದಲ ಏಳು ನಗರಗಳಲ್ಲಿ ಶೇ 23 ರಷ್ಟು ಏರಿಕೆಯಾಗಿ 1,32,818 ಕ್ಕೆ ತಲುಪಿದೆ. ಕಳೆದ ವರ್ಷ 1,08,199 ಯುನಿಟ್‌ಗಳಷ್ಟಿತ್ತು. ಹೆಚ್ಚಿನ ಮಾರಾಟವು ಏಪ್ರಿಲ್ 15 ರವರೆಗೆ ಸಂಭವಿಸಿದೆ ಎಂದು ಪ್ರೊಪ್‌ ಇಕ್ವಿಟಿ ಸೇರಿಸಲಾಗಿದೆ.
ಆದರೆ ಕೋಲ್ಲತ್ತಾದ ಮನೆ ಮಾರಾಟವು 2021 ರ ಜನವರಿ ಮತ್ತು ಏಪ್ರಿಲ್ ನಡುವೆ 4,673 ಕ್ಕೆ ಇಳಿದಿದೆ ಎಂದು ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ತಿಳಿಸಿದೆ. ದೇಶದ ರಾಜಧಾನಿ ಪ್ರದೇಶವು ಶೇಕಡಾ 20 ರಷ್ಟು ಕುಸಿತ ಕಂಡಿದೆ, ಏಕೆಂದರೆ ಇದು ಎರಡನೇ ಕೋವಿಡ್ -19 ಅಲೆಯ ಪ್ರಮುಖ ಉಲ್ಬಣವನ್ನು ಎದುರಿಸಿತು.
“ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ ತರಂಗದ ಭೀಕರತೆಗೆ ಭಾರತ ಸಾಕ್ಷಿಯಾಯಿತು, ಇದು ಬಹುತೇಕ ಎಲ್ಲಾ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ತೀವ್ರವಾಗಿ ನಿಲ್ಲಿಸಿತು. ಕೆಟ್ಟದ್ದು ನಮ್ಮ ಹಿಂದೆ ಇದೆ … ಚೇತರಿಕೆ ಶೀಘ್ರಗತಿಯಲ್ಲಿರುವುದರಿಂದ ಮನೆ ಮಾರಾಟವು ವೇಗವಾಗಿ ಪುಟಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ’’ ಎಂದು ಪ್ರಾಪ್ ಎಕ್ವಿಟಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಮೀರ್ ಜಸುಜಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

ವ್ಯವಹಾರವು ಹೆಚ್ಚಾಗುತ್ತಿದೆ … ಮುಂದಿನ ತ್ರೈಮಾಸಿಕದಲ್ಲಿ ಮೂಲಭೂತವಾಗಿ ಪ್ರಬಲ ಡೆವಲಪರ್‌ಗಳಿಂದ ಮಾರಾಟವು ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,” ಎಂದು ಆಂಬಿಯನ್ಸ್ ಗ್ರೂಪ್‌ನ ಅಧ್ಯಕ್ಷ (ಮಾರಾಟ ಮತ್ತು ಮಾರುಕಟ್ಟೆ) ಅಂಕುಶ್ ಕೌಲ್ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement