ಹರಿಯಾಣದಲ್ಲಿ ಖಾಸಗಿ ಶಾಲೆಗಳಿಗೆ ಸೇಪಡೆಯಾಗದ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು…!

ಹರಿಯಾಣದಲ್ಲಿ ಪ್ರಸಕ್ತ ಶೈಕ್ಷಣಿಕ ಅಧಿವೇಶನ ಪ್ರಾರಂಭವಾಗಿ, ಸುಮಾರು ಮೂರು ತಿಂಗಳಾಗಿದ್ದರೂ, ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿಲ್ಲ ಎಂಉ ಶಾಲಾ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಿದ್ದು, ಅವರೆಲ್ಲಾ ಶಾಲೆ ತೊರೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.
ಹರಿಯಾಣ ಶಿಕ್ಷಣ ಇಲಾಖೆಗೆ, ಖಾಸಾಗಿ ಶಾಲೆಗಳು ಸಲ್ಲಿಸಿರುವ ದತ್ತಾಂಶಗಳ ಪ್ರಕಾರ, 2021-22 ರ ಜೂನ್‍ನಲ್ಲಿ 17.31 ಲಕ್ಷ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹೋದ ವರ್ಷ ಈ ಸಂಖ್ಯೆ 29.83 ಲಕ್ಷ ಇತ್ತು ಎಂದು ತಿಳಿಸಲಾಗಿದೆ.
ಹರಿಯಾಣದಲ್ಲಿ 14,500 ಸರಕಾರಿ ಶಾಲೆಗಳು ಮತ್ತು 8,900 ಖಾಸಗಿ ಶಾಲೆಗಳಿವೆ. ಖಾಸಗಿ ಶಾಲೆಗಳ ಕೆಲವು ಮಕ್ಕಳು ಬಹುಶಃ ಶುಲ್ಕದ ಸಮಸ್ಯೆಯಿಂದ ದಾಖಲಾಗಿಲ್ಲ ಮತ್ತು ಕೆಲವು ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದಾರೆ, ಕೆಲವರಿಗೆ ಆನ್‍ಲೈನ್ ತರಗತಿಗೆ ಸೇರುವ ಸೌಲಭ್ಯ ಇಲ್ಲದೆ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಳಷ್ಟು ಜನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿರುವುದು ಕೂಡ ಇದಕ್ಕೆ ಒಂದು ಕಾರಣ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದ ಶಿಕ್ಷಣ ಸಚಿವ ಕನ್ವರ್‍ಪಾಲ್ ಗುರ್ಜರ್ , ಈ ವರ್ಷ ಮತ್ತು ಕಳೆದ ವರ್ಷದ ಶಾಲಾ ದಾಖಲಾತಿಯ ನಡುವೆ ಇರುವ ದೊಡ್ಡ ಅಂತರ’ವನ್ನು ಕಂಡು ತಮಗೆ ಅಚ್ಚರಿಯಾಗಿದೆ. ಈ ವಿಷಯದ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಖಾಸಗಿ ಶಾಲಾ ಮಾಲೀಕರ ಪ್ರಕಾರ, ಈ ಬಾರಿ ಶಾಲೆಗೆ ಮರಳದ ಮಕ್ಕಳಲ್ಲಿ ಕೆಲವರು , ಕೆಲಸ ಸಿಗದೆ ತಮ್ಮ ಊರಿಗೆ ಮರಳಿರುವ ವಲಸೆ ಕುಟುಂಬದ ಮಕ್ಕಳು.
ಸಾಮಾಜಿಕ ಮಾಧ್ಯಮದಲ್ಲಿ ಸರಕಾರಿ ಶಾಲಾ ಶಿಕ್ಷಕರ ವಿಡಿಯೋ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕೈತಾಲ್ ಜಿಲ್ಲೆಯ ಬಟ್ಟಾ ಗ್ರಾಮದಲ್ಲಿ, ಶಿಕ್ಷಕರು ಸರ್ಕಾರಿ ಶಾಲೆಗೆ ಸೇರಿಸುವಂತೆ ಧ್ವನಿವರ್ಧಕದಲ್ಲಿ ಹೇಳುತ್ತಾ ಹಳ್ಳಿ ಸುತ್ತಿಬರುತ್ತಿರುವ ದೃಶ್ಯವಿದೆ. “ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ಮುಕ್ತಿ ಪಡೆಯಲು,ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ. ಈ ಬಾರಿ ನಿಮ್ಮ ಆಯ್ಕೆ ಸರ್ಕಾರಿ ಶಾಲೆ ಆಗಿರಲಿ” ಎಂದು ವಿಡಿಯೋದಲ್ಲಿ ಮೂರು ಮಂದಿ ಹೇಳುತ್ತಿದ್ದಾರೆ.
ಪ್ರಸ್ತುತ ಇರುವ ನಿಯಮಾವಳಿಗಳ ಪ್ರಕಾರ, ವಿದ್ಯಾರ್ಥಿ ತಾನು ಓದುತ್ತಿದ್ದ ಸಂಸ್ಥೆಯಿಂದ ಶಾಲೆ ಬಿಡುವ ಪತ್ರ (ಎಸ್‍ಎಲ್‍ಸಿ) ಪಡೆಯದೆ ಇನ್ನೊಂದು ಶಾಲೆಗೆ ದಾಖಲಾತಿ ಪಡೆಯುವಂತಿಲ್ಲ. ವಿದ್ಯಾರ್ಥಿಗಳ ಹತ್ತಿರ ಶಾಲೆ ಬಿಡುವ ಪತ್ರ (ಎಸ್‍ಎಲ್‍ಸಿ) ಇರಲಿ, ಇಲ್ಲದಿರಲಿ ಸರ್ಕಾರಿ ಶಾಲೆಗಳು ಅವರನ್ನು ದಾಖಲು ಮಾಡಿಕೊಳ್ಳುತ್ತಿವೆ” ಎಂದು ಹರಿಯಾಣ ಖಾಸಗಿ ಶಾಲೆಗಳ ಅಧ್ಯಕ್ಷ ಕುಲಭೂಷಣ್ ಶರ್ಮಾ ಹೇಳಿದ್ದಾರೆ. ಅವರ ಪ್ರಕಾರ, ಖಾಸಗಿ ಶಾಲೆಗಳ ಅತ್ಯಧಿಕ ಮಂದಿ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ .

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement