ಶೀಘ್ರದಲ್ಲೇ ಎಲ್ಲ ದೇಶಗಳಲ್ಲಿಯೂ ‘ಕೋವಿನ್ ಪ್ಲಾಟ್ ಫಾರಂ ಲಭ್ಯ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೋವಿಡ್‌ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಿದದ ಕೋವಿನ್ ಪ್ಲಾಟ್ ಫಾರಂ ಅನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಶೀಘ್ರದಲ್ಲಿಯೇ ಇದು ಎಲ್ಲ ರಾಷ್ಟ್ರಗಳಲ್ಲಿಯೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಅದರ ಪರಿಣಿತಿ ಮತ್ತು ಸಂಪನ್ಮೂಲವನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಅವರುಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕೋವಿನ್ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ರಾಷ್ಟ್ರ, ಎಷ್ಟೇ ಶಕ್ತಿಯುತವಾಗಿದ್ದರೂ, ಈ ಸಾಂಕ್ರಾಮಿಕ ರೋಗದಂತಹ ಸವಾಲನ್ನು ಪ್ರತ್ಯೇಕವಾಗಿ ಪರಿಹರಿಸಲು ಆಗುವುದಿಲ್ಲ ಎಂಬುದನ್ನು ಅನುಭವ ತೋರಿಸಿದೆ. ಈ ಹೋರಾಟದಲ್ಲಿ ನಮ್ಮ ಅನುಭವಗಳು, ಪರಿಣತಿ ಮತ್ತು ಸಂಪನ್ಮೂಲಗಳನ್ನು ಜಾಗತಿಕ ಸಮುದಾಯಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಾದಷ್ಟು ಮಟ್ಟಿಗೆ ವಿಶ್ವದೊಂದಿಗೆ ಹಂಚಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ತಂತ್ರಜ್ಞಾನ ಸಹ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿಯೇ ನಾವು ಕೋವಿಡ್ ಪತ್ತೆಹಚ್ಚುವಿಕೆ ಮತ್ತು ಟ್ರ್ಯಾಕಿಂಗ್ ಆಪ್ ತಾಂತ್ರಿಕವಾಗಿ ಕಾರ್ಯಸಾಧ್ಯವಾದ ಕೂಡಲೇ ತೆರೆದಿದ್ದೇವೆ. ಸಾಂಕ್ರಾಮಿಕ ತಡೆಗೆ ಲಸಿಕೆ ಉತ್ತಮ ಭರವಸೆ ಎಂದು ಪ್ರತಿಪಾದಿಸಿದ ಮೋದಿ, ನಮ್ಮ ಲಸಿಕೆ ಕಾರ್ಯತಂತ್ರ ಯೋಜನೆಯಲ್ಲಿ ಸಂಪೂರ್ಣ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇಡೀ ವಿಶ್ವವನ್ನು ಒಂದು ಕುಟುಂಬದಂತೆ ಭಾರತೀಯ ನಾಗರಿಕತೆ ಪರಿಗಣಿಸುತ್ತದೆ. ಈ ಸಾಂಕ್ರಾಮಿಕವು ನಮ್ಮ ಈ ಸಿದ್ಧಾಂತವನ್ನು ಅನೇಕ ಜನರಲ್ಲಿ ಮನವರಿಕೆ ಮಾಡಿದೆ. ಆದ್ದರಿಂದ ಕೋವಿಡ್ ಲಸಿಕೆಗಾಗಿ ಅಭಿವೃದ್ಧಿಪಡಿಸಲಾದ ನಮ್ಮ ತಂತ್ರಜ್ಞಾನ ಕೋವಿನ್ ಅನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಇದು ಎಲ್ಲ ದೇಶಗಳಲ್ಲಿ ಇದು ಲಭ್ಯವಿರಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕೆನಡಾ, ಮೆಕ್ಸಿಕೊ, ನೈಜಿರಿಯಾ, ಪನಾಮ ಮತ್ತು ಉಗಾಂಡ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳು ಲಸಿಕಾ ಅಭಿಯಾನದಲ್ಲಿ ಕೋವಿನ್ ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಉಚಿತವಾಗಿ ಹಂಚಿಕೊಳ್ಳಲು ಭಾರತ ಸಿದ್ಧವಿರುವುದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಓ ಡಾ. ಆರ್.ಎಸ್. ಶರ್ಮಾ ಇತ್ತೀಚಿಗೆ ಹೇಳಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement