1.85 ಕೋಟಿ ರೂ.ಮೌಲ್ಯದ ಹ್ಯಾಷ್ ಆಯಿಲ್, ಗಾಂಜಾ ವಶ..!

ಬೆಂಗಳೂರು: ಕಾರಿನಲ್ಲಿ ಮಾದಕ ವಸ್ತುಗಳಾದ ಹ್ಯಾಷ್ ಆಯಿಲ್ ಮತ್ತು ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತಿದ್ದ ಕೇರಳ ಮೂಲದ ವ್ಯಕ್ತಿ ಸೇರಿದಂತೆ ನಾಲ್ವರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ ಅವರಿಂದ 1.85 ಕೋಟಿ ರೂ. ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ಅನೀಸ್ (29) ಮತ್ತು ಲೋಕೇಶ್ (35), ಮೋಹನ್‍ಕುಮಾರ್ (23), ಜಬಿ (24) ಬಂಧಿತರಾಗಿದ್ದಾರೆ. ಮಡಿವಾಳ ಠಾಣೆ ಇನ್‍ಸ್ಪೆಕ್ಟರ್ ಸುನಿಲ್ ವೈ.ನಾಯಕ್ ಜು.3ರಂದು ಬೆಳಗ್ಗೆ ಹಳೆಯ ಪ್ರಕರಣದಲ್ಲಿ ತನಿಖೆಯಲ್ಲಿದ್ದಾಗ ಜೋಗಿ ಕಾಲೋನಿ ಪಾರ್ಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಿಳಿ ಬಣ್ಣದ ಮಹೀಂದ್ರ ಕಾರು ನಿಲ್ಲಿಸಿಕೊಂಡು ಐವರು ಸಂಶಯಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ್ದಾರೆ.
ವಿಚಾರಿಸಲು ಹೋಗುತ್ತಿದ್ದಂತೆ ಸ್ಥಳದಿಂದ ಒಬ್ಬಾತ ತಪ್ಪಿಸಿಕೊಂಡು ಓಡಿಹೋಗಿದ್ದು, ಉಳಿದ ನಾಲ್ವರನ್ನು ಬಂಧಿಸಿ ಸುಮಾರು 1.85 ಕೋಟಿ ರೂ. ಬೆಲೆಬಾಳುವ ಹ್ಯಾಷ್ ಆಯಿಲ್, 4 ಕೆಜಿ ಗಾಂಜಾ ಮಾದಕ ವಸ್ತುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮಹೀಂದ್ರ ಝೈಲೋ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅನೀಸ್ ಹ್ಯಾಷ್ ಆಯಿಲ್ ಮತ್ತು ಗಾಂಜಾವನ್ನು ವಿಶಾಖಪಟ್ಟಣದಿಂದ ಬೆಂಗಳೂರಿಗೆ ತಂದು ಮಡಿವಾಳ ವ್ಯಾಪ್ತಿಯ ಜೋಗಿ ಕಾಲೋನಿ ಪಾರ್ಕ್ ಬಳಿ ಸಹಚರರ ಜತೆ ಮಾರಾಟ ಮಾಡಲು ಬಂದು ಸಿಕ್ಕಿಬಿದ್ದಿದ್ದಾರೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ ಜೋಷಿ ನಿರ್ದೇಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸುರೇರ್ ಎಂ. ಹೆಗಡೆ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಸುನಿಲ್ ವೈ.ನಾಯಕ್ ‌ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement