ಕುಮಟಾ; ಬಾಡ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯ ಮಣಿಗಾರ ಮಹಾಬಲೇಶ್ವರ ಹೆಗಡೆ ನಿಧನ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ಮಣಿಗಾರರಾಗಿದ್ದ ಮಹಾಬಲೇಶ್ವರ ಹೆಗಡೆ (೯೨)ಮಂಗಳವಾರ ರಾತ್ರಿ ನಿಧನರಾದರು.
ಸೂಮಾರು ೭೦ ವರ್ಷಗಳ ಕಾಲ ಶ್ರೀದೇವಾಲಯದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.ಕೃಷಿಕರು ಆಗಿದ್ದ ಹೆಗಡೆ ತಮ್ಮ ೯೨ ರ ಇಳಿವಯಸ್ಸಿನಲ್ಲೂ ಭತ್ತ ಇತ್ಯಾದಿ ಕೃಷಿಯಲ್ಲಿ ನಿರತರಾಗಿದ್ದರು.ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಹವ್ಯಕ ಸಂಘ ಇತರ ಸಂಘಸಂಸ್ಥೆಗಳ ಪ್ರಶಸ್ತಿ, ಸನ್ಮಾನ ನೀಡಿ ಗೌರವಿಸಿತ್ತು.
ಇಂತಹ ಪ್ರಾಮಾಣಿಕರನ್ನು ಜಿಲ್ಲೆ ಕಳೆದುಕೊಂಡಿದೆ ಎಂದು ಹವ್ಯಕ ಸಂಘ ಬಾಡವಲಯದ ಅಧ್ಯಕ್ಷರಾದ ಆರ್.ಎನ್.ಹೆಗಡೆ ದುಃಖ ವ್ಯಕ್ತಪಡಿಸಿದ್ದಾರೆ. ದೇವಾಲಯದ ಲಕ್ಷಾಂತರ ಭಕ್ತರ ಪಾಲಿಗೆ ಮಹಾತ್ಮರಂತಿದ್ದ ಹೆಗಡೆ ನಿಧನವು ತುಂಬಲಾರದ ನಷ್ಟ ಎಂದು ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಹವ್ಯಕ ಸಂಘದ ಉಪಾಧ್ಯಕ್ಷ ಎನ್.ವಿ.ಹೆಗಡೆ, ರೇಖಾ ಹೆಗಡೆ,ಡಾ.ಅನಿಲ ಹೆಗಡೆ, ಡಾ.ಆರ್.ವಿ.ಭಟ್ಟ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement