ನಮ್ಮ ಮೆಟ್ರೊಗೆ ಜಗಜ್ಯೋತಿ ಬಸವೇಶ್ವರರ ಹೆಸರಿಡಿ:ಸಿಎಂಗೆ ಮನವಿ

posted in: ರಾಜ್ಯ | 0

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೊಗೆ ವಿಶ್ವಗುರು ಶ್ರೀಜಗಜ್ಯೋತಿ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಾಕ್ಷ ಡಾ.ಶರಣಪ್ಪ ಎಂ.ಕೊಟಗಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ವಿಶ್ವಗುರು ಶ್ರೀಜಗಜ್ಯೋತಿ ಬಸವೇಶ್ವರರು ೧೨ನೇ ಶತಮಾನದಲ್ಲಿಯೇ ಅನುಭವಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವದ ಅರಿವು ಮೂಡಿಸಿ ಈಗಿನ ಸಂವಿಧಾನದ ಕಲ್ಪನೆಯನ್ನು ಆಗಲೇ ಪ್ರೇರೇಪಿಸಿದ್ದರು ಅಂತಹ ಮಹನೀಯರ ಹೆಸರನ್ನು ಬೆಂಗಳೂರಿನ ನಮ್ಮ ಮೆಟ್ರೋಗೆ ನಾಮಕರಣ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಜಾತ್ಯಾತೀತ ಮನೋಭಾವವನ್ನು ತಿಳಿಸಿಕೊಟ್ಟ ಬಸವಣ್ಣನವರು ಸಮಾಜ ಸುಧಾರಕರಾಗಿ ಸರ್ವಜನಾಂಗದ ಏಳ್ಗೆಗಾಗಿ ಅವರು ನೀಡಿದ ಮಾರ್ಗವನ್ನು ವಚನಗಳನ್ನು ನಾವೆಲ್ಲರೂ ಪಾಲಿಸಬೇಕಿದೆ.

ರಾಜ್ಯ ಸರಕಾರ ಕೂಡಲೇ ರಾಜ್ಯದ ಮೆಟ್ರೋ ಯೋಜನೆಗೆ ವಿಶ್ವಗುರು ಶ್ರೀಜಗಜ್ಯೋತಿ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಾಕ್ಷ ಡಾ.ಶರಣಪ್ಪ ಎಂ.ಕೊಟಗಿ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ನಾಗರಾಜ ಕೊಟಗಿ, ಉತ್ತರ ಕರ್ನಾಟಕ ನಾಗರೀಕರ ಸಂಘದ ಅಧ್ಯಕ್ಷ ಮುರಿಗೇಶ ಜವಳಿ, ಉತ್ತರ ಕರ್ನಾಟಕ ನಾಗರೀಕರ ಸಂಘದ ಅಧ್ಯಕ್ಷ ಅಂದಪ್ಪ ಜವಳಿ,  ಎಮ್.ಎಸ್.ಐ.ಎಲ್. ನಿರ್ದೇಶಕರಾದ ಮಹೇಶ ಲಂಬಿ, ಡಾ.ಶಿವಯೋಗಿ ತೆಂಗಿನಕಾಯಿ, ಉಮೇಶಗೌಡ ಪಾಟೀಲ, ಡಾ.ಪ್ರಕಾಶಗೌಡ ಪಾಟೀಲ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿಕಾಯಿ, ಉಮೇಶ ಬಣಕಾರ, ಚುಡಾಮಣಿ ಹಳ್ಳಿಗಳಿ, ರಾಜಶೇಖರ ಕಲ್ಯಾಣಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement