ಸಹಕಾರದಿಂದ ಸಮೃದ್ಧಿ: ಮೋದಿ ಸರ್ಕಾರದಿಂದ ಹೊಸ ಸಹಕಾರ ಸಚಿವಾಲಯ ರಚನೆ

ನವದೆಹಲಿ: ಕೇಂದ್ರ ಸರ್ಕಾರವು ಹೊಸದೃಷ್ಟಿಕೋನ ಹೊಂದಿದ ‘ಸಹಕಾರದಿಂದ ಸಮೃದ್ಧಿ’ ಎಂಬ ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ.
ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ-ನಿರುಪಣೆಗೆ ಚೌಕಟ್ಟು ಒದಗಿಸಲಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರದ ಈ ಸಹಕಾರಿ ಸಚಿವಾಲಯವು ಸಹಕಾರಿ ಚಳವಳಿಯಲ್ಲಿ ತೊಡಗಿರುವ ಜನರಿಗೆ ನೆರವಾಗುವುದಕ್ಕೆ ಸಹಕಾರಿಯಾಗಲಿದೆ. ಇದರ ಜೊತೆಗೆ ಈ ಸಚಿವಾಲಯವು ಸಹಕಾರಿ ಸಂಸ್ಥೆಗಳಿಗೆ ‘ವ್ಯವಹಾರ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್‌ಸಿಎಸ್) ಶಕ್ತಗೊಳಿಸುವ ಕಾರ್ಯ ಮಾಡಲಿದೆ.

ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರ ತನ್ನ ಬದ್ಧತೆ ಸೂಚಿಸಿದೆ. ಸಹಕಾರಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವುದು ಹಣಕಾಸು ಸಚಿವರು ಮಾಡಿದ ಬಜೆಟ್ ಘೋಷಣೆಯಂತೆ ಕೇಂದ್ರ ಸರ್ಕಾರ ಹೊಸ ಸಚಿವಾಲಯದ ರಚನೆಗೆ ಮುಂದಾಗಿದೆ..

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement