ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆವಿಮೆ : ಮುಂಚಿತವಾಗಿ ಕಂತು ಪಾವತಿಸಿ

posted in: ರಾಜ್ಯ | 0

ಗದಗ: ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಬೆಳೆಗಳಾದ ಹೆಸರು ಬೆಳೆಗೆ ವಿಮಾ ಕಂತು ತುಂಬಲು ಜುಲೈ 15 ಕೊನೆಯ ದಿನವಾಗಿದೆ. ಶೇಂಗಾ, ಮುಸುಕಿನ ಜೋಳ, ಜೋಳ, ಹತ್ತಿ, ಸಜ್ಜೆ, ಒಣ ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳಿಗೆ ವಿಮಾ ಕಂತು ತುಂಬಲು ಜುಲೈ 31 ಹಾಗೂ ಸೂರ್ಯಕಾಂತಿ ಬೆಳೆಗೆ ಅಗಸ್ಟ 16 ಕೊನೆಯ ದಿನವಾಗಿದೆ.

ರೈತರು ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ನೋಂದಣಿ ಮಾಡಿಸಬೇಕೆಂದು ಕೃಷಿ  ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೆಳೆ ಸಮೀಕ್ಷೆ ಉತ್ಸವ: ಸ್ವಾಭಿಮಾನಿ ರೈತ ಸ್ವ ಸಮೀಕ್ಷೆ ಸ್ವಯಾರ್ಜಿತ ಸವಲತ್ತು:

ಸ್ವಾಭಿಮಾನಿ ರೈತ ಸ್ವ ಸಮೀಕ್ಷೆ ಸ್ವಯಾರ್ಜಿತ ಸವಲತ್ತು ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಹಿತಿಯನ್ನು ಛಾಯಾಚಿತ್ರ ಸಹಿತ ತಾವೇ ಖುದ್ದಾಗಿ ಅಪ್ಲೋಡ್ ಮಾಡುವ ಒಂದು ವಿನೂತನ ಯೋಜನೆಯಾಗಿದೆ.

ಮೊಬೈಲ್ ಅಪ್ಲಿಕೇಷನ್‌ನ್ನು ಬಳಸಿ ಸಮೀಕ್ಷೆ ಮಾಡುವುದರ ಮೂಲಕ ಬೆಳೆ ಪ್ರದೇಶದ ನಿಖರ ಅಂಕಿ ಅಂಶಗಳ ಕ್ರೋಢೀಕರಣ, ಆಯಾ ಋತುಮಾನಕ್ಕನುಗುಣವಾಗಿ ಪಹಣಿಗಳಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಿಸಿಕೊಳ್ಳಬೇಕು. ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸೆರೆ ಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಟ ಬೆಂಬಲ ಬೆಲೆ, ಬೆಳೆ  ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ವೇಳೆ ನಷ್ಟ ಪರಿಹಾರ, ಬೆಳೆ ಸಾಲ ಪಡೆಯಲು, ಸಬ್ಸಿಡಿ ಪಾವತಿ ಬೆಳೆ ಪ್ರದೇಶದ ಅಂದಾಜು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಬಳಸಿಕೊಳ್ಳಲಾಗುವುದು.  ಸ್ಥಳೀಯ ಯುವಕರ ಸೇವೆಯನ್ನು ಬಳಸುವುದರ ಮೂಲಕ ತಾತ್ಕಾಲಿಕ ಉದ್ಯೋಗದ ಸೃಷ್ಟಿಯಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ