ಹೊಸದಿಲ್ಲಿ: ಪ್ರತಿ ಮನೆಗೂ ಶುದ್ಧ ನಲ್ಲಿ ನೀರು ಒದಗಿಸುವ ಪ್ರಧಾನಿ ಮೋದಿಯವರ ಆಶಯ ಕಾರ್ಯರೂಪಕ್ಕೆ ತರುವ ಜಲ ಜೀವನ್ ಮಿಷನ್ ಅನ್ವಯ ಕೇಂದ್ರ ಸರ್ಕಾರವು ೨೦೨೧-೨೨ರ ಸಾಲಿಗೆ ಕರ್ನಾಟಕಕ್ಕೆ ೫,೦೦೮.೭೯ ಕೋಟಿ ರೂ. ಅನುದಾನ ಹೆಚ್ಚಿಸಿದೆ. ೨೦೨೦-೨೧ರಲ್ಲಿ ಈ ಹಣ ೧,೧೮೯.೪೦ ಕೋಟಿ ರೂ. ಆಗಿತ್ತು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಒಂದು ವರ್ಷದಲ್ಲೇ ನಾಲ್ಕು ಪಟ್ಟು ಹೆಚ್ಚಿನ ಅನುದಾನ ನೀಡಿರುವುದು ೨೦೨೩ರ ವೇಳೆಗೆ ಕರ್ನಾಟಕದ ಪ್ರತಿ ಗ್ರಾಮದ ಮನೆಗೂ ನಲ್ಲಿ ನೀರು (ಹರ್ ಘರ್ ಜಲ ಗುರಿ) ಪೂರೈಸಲು ರಾಜ್ಯಕ್ಕೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
೨೦೧೯ರಲ್ಲಿ ಜಲ ಜೀವನ್ ಮಿಷನ್ ಆರಂಭವಾದಾಗ, ದೇಶದ ಒಟ್ಟು ೧೯.೨೦ ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಕೇವಲ ೩,೨೩ ಕೋಟಿ (ಶೇ.೧೭) ಜನರು ನಲ್ಲಿ ನೀರು ಪೂರೈಕೆ ಹೊಂದಿದ್ದರು. ಕಳೆದ ೨೨ ತಿಂಗಳಲ್ಲಿ ಕೊರೋನಾ ಸೋಂಕು ಮತ್ತು ಲಾಕ್‌ಡೌನ್ ಅಡೆತಡೆಗಳ ಹೊರತಾಗಿಯೂ, ಜಲ ಜೀವನ್ ಮಿಷನ್‌ನ ಕಾರ್ಯವನ್ನು ವೇಗದಿಂದ ಜಾರಿಗೊಳಿಸಲಾಗುತ್ತಿದೆ ಮತ್ತು ೪.೪೨ ಕೋಟಿ ಮನೆಗಳಿಗೆ ಕೊಳವೆ ಸಂಪರ್ಕ ಒದಗಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ