ಪಾನಿಪುರಿ ಮದುವೆ..: ಮದುಮಗಳಿಗೆ ಪಾನಿಪುರಿ ಅಲಂಕಾರ..! ವಿಡಿಯೋ ವೈರಲ್‌

posted in: ರಾಜ್ಯ | 0

ಬೆಂಗಳೂರು: ಜೀವನದಲ್ಲಿ ಮದುವೆ ಆಗೋದು ಒಂದೇ ಸಲ. ಅದನ್ನು ಆದಷ್ಟೂ ಒಳ್ಳೆ ರೀತಿಯಲ್ಲಿ ಹಾಗೂ ಸ್ಮರಣೆಯಲ್ಲುಳಿಯುವ ರೀತಿ ಆಗಬೇಕು ಎಂದು ಎಷ್ಟೋ ಯುವಕ ಯುವತಿಯರು ಕನಸು ಕಾಣುವುದು ಸಹಜ. ಕೆಲವರಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಬೇಕು ಎನ್ನುವ ಹಂಬಲ. ಅದಕ್ಕಾಗಿಯೇ ಏನೇನೋ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನು ಕೆಲವರಿಗೆ ವಿಶೇಷವಾಗಿ ಮದುವೆಯಾದರೆ ಪ್ರಸಿದ್ಧರಾಗುತ್ತೇವೆ ಎನ್ನುವತ್ತಲೂ ಒಲವು ಹೊಂದಿರುತ್ತಾರೆ. ಅಂಥದ್ದೇ ಒಂದು ಮದುವೆ  ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಅಂತಿಂಥ ಮದುವೆಯಲ್ಲಿ ಇದು ಪಾನೀಪುರಿ ಮದುವೆ. ಮದುಮಗಳನ್ನು ವಿಶೇಷ ರೀತಿಯಲ್ಲಿ ಪಾನಿಪುರಿಗಳಿಂದಲೇ ಅಲಂಕರಿಸಲಾಗಿದೆ. ಆಕೆ ಧರಿಸಿರುವ ಕಿರೀಟ ಹಾಗೂ ಹಾಕಿಕೊಂಡಿರುವ ಮಾಲೆ ಎರಡೂ ಪಾನೀಪುರಿಯಲ್ಲಿ ಬಳಸುವ ಪುರಿಗಳಿಂದ ಸಿದ್ಧಪಡಿಸಲಾಗಿದೆ. ಅದೇ ಕಾರಣಕ್ಕೆ ಈ ಮದುಮಗಳೀಗಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ಮದುಮಗಳ ವಿಡಿಯೋ ಒಂದನ್ನು ಒಬ್ಬರು ಶೇರ್ ಮಾಡಿದ್ದು, ಅದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಮದುಮಗಳ ಹೆಸರು ಅಕ್ಷಯಾ. ಅಭಿಷೇಕ್ ಎಂಬುವವರ ಜತೆ ಇವರು ಮದುವೆಯಾಗಿದ್ದಾಳೆ. ಸರಕಾರ ಘೋಷಿಸಿರುವ  ಲಾಕ್ ಡೌನ್ ವೇಳೆಯಲ್ಲಿ ಕೊರೋನಾ ನಿಯಮ ಪಾಲನೆ ಮಾಡಿ ಮದುವೆ ಮಾಡಬೇಕಿದೆ. ಮದುವೆಗೆ ಹೆಚ್ಚಿನ ಜನರನ್ನು ಆಹ್ವನಿಸುವಂತಿಲ್ಲ. ಹೇಗಾದರೂ ಮಾಡಿ ನಮ್ಮ ಮದುವೆ ಅತ್ಯಾಕರ್ಷಕವಾಗಿರಬೇಕು ಎಂಬ ಹಿನ್ನೆಲೆಯಲ್ಲಿ  ಮದುಮಗನ್ನು ವಿಶೇಷವಾಗಿ ಪಾನಿಪುರಿಗಳಿಂದಲೇ ಅಲಂಕಾರ ಮಾಡಲಾಗಿದೆ. ಏನೇ ಆಗಲಿ ವಧು-ವರರ ಕನಸು ನನಸಾಗಿರುವ ಸಂಭ್ರಮ ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಮದುಮಗಳು ಭರ್ಜರಿ ಮಿಂಚುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ