ಅಮೆರಿಕದ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತದ ನೂತನ ರಾಯಭಾರಿಯಾಗಿ ನೇಮಕ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತದ ನೂತನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಅವರು ಸೆನೆಟ್ ಸಮ್ಮತಿ ದೃಢೀಕರಣ ಪಡೆದರೆ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ 50 ವರ್ಷದ ಗಾರ್ಸೆಟ್ಟಿ 2021 ರ ಜನವರಿ ನಂತರ ನವದೆಹಲಿಯಲ್ಲಿ ಈಗ ಅಮೆರಿಕ ರಾಯಭಾರಿಯಾಗಿರುವ ಕೆನ್ನೆತ್ ಜಸ್ಟರ್ ಉತ್ತರಾಧಿಕಾರಿಯಾಗಲಿದ್ದಾರೆ.
ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಳ್ಳುತ್ತಿರುವ ಒಪ್ಪಿಕೊಳ್ಳುತ್ತಿರುವುದು ಗೌರವದ ವಿಷಯವಾಗಿದೆ ಎಂದು ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಗಾರ್ಸೆಟ್ಟಿ 2013 ರಿಂದ ಲಾಸ್ ಏಂಜಲೀಸ್ ಮೇಯರ್ ಆಗಿದ್ದರು, 12 ವರ್ಷಗಳ ಸಿಟಿ ಕೌನ್ಸಿಲ್ ಸದಸ್ಯರಾಗಿ, 6 ವರ್ಷಗಳ ಕಾಲ ಕೌನ್ಸಿಲ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಮೊನಾಕೊಗೆ ಡೆನಿಸ್ ಕ್ಯಾಂಪ್ಬೆಲ್ ಬಾಯರ್ ಅವರನ್ನು, ಬಾಂಗ್ಲಾದೇಶಕ್ಕೆ ಪೀಟರ್ ಡಿ. ಹಾಸ್ ಅವರನ್ನು, ಬರ್ನಾಡೆಟ್ಟೆ ಎಂ. ಮೀಹನ್ ಅವರನ್ನು ಚಿಲಿಗೆ ರಾಯಭಾರಿಗಳನ್ನಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನೇಮಕ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement