ಬೆಂಬಲ ಬೆಲೆಯಡಿ ಭತ್ತ-ರಾಗಿ- ಬಿಳಿಜೋಳ ಮಾರಾಟ ಮಾಡಿದ ರೈತರಿಗೆ ಬಾಕಿ ಹಣ ಬಿಡುಗಡೆ

posted in: ರಾಜ್ಯ | 0

ಬೆಂಗಳೂರು: ೨೦೨೦ರಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಬೆಳೆ ಮಾರಾಟ ಮಾಡಿದ್ದ ರೈತರಿಗೆ ರಾಜ್ಯ ಸರಕಾರ ಬಾಕಿ ಹಣ ಬಿಡುಗಡೆ ಮಾಡಿದೆ.

ರಾಜ್ಯದ ರೈತರಿಂದ ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸಲಾದ ಆಹಾರ ಧಾನ್ಯಗಳಾದ ಭತ್ತ, ರಾಗಿ ಮತ್ತು ಬಿಳಿಜೋಳದ ಮೌಲ್ಯವನ್ನು ೨೦೨೦-೨೧ ನೇ ಸಾಲಿನ ಬಾಕಿ ಮೊತ್ತ ರೈತರಿಗೆ ಪಾವತಿಸಲು ೧೦೦೦ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ರಾಜ್ಯದ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾದ ಭತ್ತ, ರಾಗಿ ಮತ್ತು ಬಿಳಿಜೋಳವನ್ನು ರಾಜ್ಯದ ಸಾಮಾನ್ಯ ವರ್ಗದ ಎಎವೈ ಮತ್ತು ಪಿಹೆಚ್ ಹೆಚ್ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಚಿಂತನೆ ನಡೆದಿದೆ.

ಇದಕ್ಕಾಗಿ ಆವರ್ತನ ನಿಧಿಯಿಂದ ೩೦೦ ಕೋಟಿ ರೂ.ಗಳನ್ನು ಹಾಗೂ ಕೇಂದ್ರ ಸರ್ಕಾರದಿಂದ ಸ್ವೀಕೃತವಾದ ೧೨೩.೪೮ ಕೋಟಿ ರೂ.ಗಳನ್ನು ಈ ಉದ್ದೇಶಕ್ಕಾಗಿ ಉಯೋಗಿಸಿಕೊಳ್ಳಲಾಗಿದ್ದು, ಇದುವರೆಗೂ ಒಟ್ಟಾರೆ ೧,೪೨೩.೪೮ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement