ಹುಡುಗ ಕಪ್ಪು ಎಂದು ಮದುವೆ ನಿರಾಕರಿಸಿದ ತಂಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣ..!

posted in: ರಾಜ್ಯ | 0

ರಾಯಚೂರು : ಮದುವೆ ನಿಶ್ಚಯವಾಗಿದ್ದ ವರ ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ವಧು ಮದುವೆ ನಿರಾಕರಿಸಿದ್ದಕ್ಕೆ ತನ್ನ ತಂಗಿಯನ್ನ ಅಣ್ಣ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಎಂಬಲ್ಲಿ ನಡೆದ ವರದಿಯಾಗಿದೆ.
ಗಬ್ಬೂರು ಗ್ರಾಮದ ನಿವಾಸಿ ಚಂದ್ರಕಲಾ (22 ವರ್ಷ) ಎಂಬಾಕೆಯೇ ಅಣ್ಣನಿಂದ ಕೊಲೆಯಾದ ಯುವತಿ. ಆಕೆಯ ಅಣ್ಣ ಶ್ಯಾಮ ಸುಂದರ ಎಂಬವನೇ ಕೊಲೆ ಮಾಡಿ ಅಣ್ಣ. ಚಂದ್ರಕಲಾಗೆ ಜುಲೈ 13 ರಂದು ಮದುವೆ ನಿಗದಿಯಾಗಿತ್ತು. ಮನೆಯವರು ಮದುವೆಯ ಲಗ್ನಪತ್ರಿಕೆಯನ್ನು ಹಂಚಿಕೆ ಮಾಡಿದ್ದರು. ಮದುವೆಗೆ ಬೇಕಾದ ಎಲ್ಲಾ ಸಿದ್ದತೆಯೂ ನಡೆದಿತ್ತು. ಮುದುವೆ ಮೂರು ದಿನಗಳಿರುವಾಗ ಮೂರು ದಿನವಿರುವಾಗ ಚಂದ್ರಕಲಾ ತನಗೆ ಮದುವೆ ಬೇಡ ಎಂದಿದ್ದಾಳೆ.
ಮನೆಯವರು ಕಾರಣ ಕೇಳಿದ್ದಕ್ಕೆ ಹುಡುಗ ಕಪ್ಪಾಗಿದ್ದಾನೆ ಎಂದು ತಿಳಿಸಿದ್ದಾಳೆ. ಈ ವೇಳ ಕೋಪಗೊಂಡ ಅಣ್ಣ ಶ್ಯಾಮಸುಂದರ ಮನೆಯಲ್ಲಿದ್ದ ಕೊಡಲಿಯಿಂದ ತಂಗಿಯನ್ನು ಕೊಚ್ಚಿ ಕೊಲೆಗೈದಿದ್ದಾನೆ. ಈ ಕುರಿತು ಗಬ್ಬೂರು ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿ ಶ್ಯಾಮಸುಂದರನನ್ನು ಪೊಲೀಸರು ಬಂಧಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ