ಕೇರಳದಲ್ಲಿ 22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರಿಗೆ ಝಿಕಾ ವೈರಸ್ ಸೋಂಕು, ಒಟ್ಟು ಸಂಖ್ಯೆ 18ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಝಿಕಾ ವೈರಸ್ ಹರಡುವಿಕೆ ಮುಂದುವರೆದಿದ್ದು, ಇಂದು (ಭಾನುವಾರ) ಮತ್ತೆ ಮೂವರಲ್ಲಿ ವೈರಸ್ ಸೋಂಕು ದೃಢಪಟ್ಟಿದೆ.
22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರು ಝಿಕಾ ವೈರಸ್ ಸೋಂಕಿಗೆ ಒಳಗಾಗಿದ್ದು, 22 ತಿಂಗಳ ಮಗು, 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಭಾನುವಾರ ಸೋಂಕು ಕಾಣಿಸಿಕೊಂಡಿದ್ದು, ಝಿಕಾ ವೈರಸ್ ಸೋಂಕು ದೃಢಪಟ್ಟವರ ಸಂಖ್ಯೆ ಕೇರಳದಲ್ಲಿ 18 ಕ್ಕೆ ಏರಿಕೆಯಾಗಿದೆ.
ಕೇರಳದ ತಿರುವನಂತಪುರಂ, ತ್ರಿಶೂರ್ ಮತ್ತು ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಘಟಕದಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಆರೋಗ್ಯ ಸಚಿವರಾದ ವೀಣಾ ಜಾರ್ಜ್ ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ 18 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಎರಡು ಬ್ಯಾಚ್‌ಗಳಲ್ಲಿ ಪರೀಕ್ಷೆಗೆ ಕಳುಹಿಸಲಾದ 27 ಮಾದರಿಗಳಲ್ಲಿ 26 ಮಾದರಿಗಳು ನೆಗೆಟಿವ್ ಬಂದಿದೆ. ಎಂಟು ಸ್ಯಾಂಪಲ್‌ ಗಳೊಂದಿಗೆ ಮೂರನೇ ಬ್ಯಾಚ್‌ನಲ್ಲಿ ಮೂವರು ಭಾನುವಾರ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.
ಆರೋಗ್ಯ ಇಲಾಖೆಯ ಪ್ರಕಾರ, ಎನ್‌ಐವಿ ಪುಣೆಯಿಂದ 2,100 ಪರೀಕ್ಷಾ ಕಿಟ್‌ಗಳನ್ನು ತರಿಸಿಕೊಳ್ಳಲಾಗಿದ್ದು, ಈ ಪೈಕಿ 1,000 ಕಿಟ್ ಗಳನ್ನು ತಿರುವನಂತಪುರಂಗೆ, ತಲಾ 300 ಕಿಟ್ ಗಳನ್ನು ತ್ರಿಶೂರ್ ಮತ್ತು ಕೋಝಿಕೋಡ್‌ಗೆ, 500 ಕಿಟ್ ಗಳನ್ನು ಆಲಪ್ಪುಳದಲ್ಲಿರುವ ಎನ್‌ಐವಿಗೆ ನೀಡಲಾಗಿದೆ.
ಇದು ಡೆಂಗ್ಯೂ ವೈರಸ್, ಚಿಕೂನ್‌ಗುನ್ಯಾ ವೈರಸ್ ಮತ್ತು ಝಿಕಾ ವೈರಸ್ ಅನ್ನು ಮಾತ್ರ ಪತ್ತೆಹಚ್ಚಬಲ್ಲ ಆರ್‌ಎನ್‌ಎಯನ್ನು ಏಕಕಾಲದಲ್ಲಿ ಪತ್ತೆಹಚ್ಚಲು ಮತ್ತು ಪ್ರತ್ಯೇಕಿಸಲು ಅನುವು ಮಾಡಿಕೊಡುತ್ತದೆ” ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಕಾ ವೈರಸ್ ಸೋಂಕಿಗೆ ಒಳಗಾಗಿದೆ ಎಂದು ಶಂಕಿಸಲಾಗಿರುವವರ ರಕ್ತದ ಮಾದರಿಗಳನ್ನು ಸಂಗ್ರಹಿಸುವಂತೆ ಪುಣೆ ಎನ್‌ಐವಿ ಆರೋಗ್ಯ ಇಲಾಖೆಗೆ ಸೂಚಿಸಿದೆ.
ಅಂತೆಯೇ ರಾಜ್ಯದ ಹೆಚ್ಚಿನ ಲ್ಯಾಬ್‌ಗಳಿಗೆ ಜಿಕಾ ವೈರಸ್‌ಗೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯದಲ್ಲಿ 27 ಸರ್ಕಾರಿ ಲ್ಯಾಬ್‌ಗಳಿವೆ, ಅದು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಬಲ್ಲದು ಮತ್ತು ಹೆಚ್ಚಿನ ಪರೀಕ್ಷಾ ಕಿಟ್‌ಗಳು ರಾಜ್ಯವನ್ನು ತಲುಪುತ್ತಿದ್ದಂತೆ, ಎನ್‌ಐವಿಯಿಂದ ಅನುಮತಿ ಪಡೆದ ನಂತರ ಈ ವೈರಸ್‌ಗೆ ಪರೀಕ್ಷೆ ನಡೆಸಲು ಈ ಲ್ಯಾಬ್‌ಗಳನ್ನು ಬಳಸುತ್ತೇವೆ. ಆ ರೋಗಿಗಳಿಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಜ್ವರ, ಚರ್ಮದ ಮೇಲೆ ದದ್ದುಗಳು ಮತ್ತು ಮೈ ಕೈ ನೋವು ಪರೀಕ್ಷಿಸಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement