ಜೈಪುರ ಅರಮನೆ ಗೋಪುರದಲ್ಲಿ ಸೆಲ್ಫಿ ತೆಗೆಯುವಾಗ ಸಿಡಿಲು ಬಡಿದು 11 ಜನರು ಸಾವು..!

ಜೈಪುರ: ಉತ್ತರ ಭಾರತದ ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಹಲವು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಜೈಪುರದ ಅರಮನೆ ಗೋಪುರದ ಮೇಲೆ ನಿಂತು ಒಟ್ಟಾಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಸಿಡಿಲು ಬಡಿದು 11 ಜನರು  ಸಾವಿಗೀಡಾಗಿದ್ದಾರೆ.

ರಾಜಸ್ಥಾನದ ಜೈಪುರ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್ ಬಳಿಯ ವಾಚ್ ಟವರ್ ನಲ್ಲಿ ಈ ಘಟನೆ ಸಂಭವಿಸಿದ್ದು, ಸಿಡಿಲು ಬಡಿದು 11 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, 11 ರಿಂದ 12ಜನ ಗಾಯಗೊಂಡಿದ್ದಾರೆ ಎಂದು ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ ತಿಳಿಸಿದ್ದಾರೆ.

ಅಮೆರ್ ಕೋಟೆಯ ಎದುರಿನ ಬೆಟ್ಟಗಳಲ್ಲಿರುವ ವಾಚ್ ಟವರ್ನಲ್ಲಿ ಸಿಡಿಲು ಮಿಂಚು ಬಡಿದು ಈ ಘಟನೆ ನಡೆದಿದೆ. ದುರಂತದ ಸ್ಥಳದಲ್ಲೇ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು ಎಂದು ಅಮೆರ್ ಪೊಲೀಸ್ ಠಾಣೆ ಎಸ್‌ಎಚ್‌ಒ ಶಿವನಾರಾಯಣ್ ಹೇಳಿದ್ದಾರೆ.

ಘಟನೆ ಸ್ಥಳಕ್ಕೆ ಆರೋಗ್ಯ ಸಚಿವ ರಘು ಶರ್ಮಾ ಭೇಟಿ:

ಘಟನೆಯ ನಡೆದ ಸ್ಥಳಕ್ಕೆ ಆರೋಗ್ಯ ಸಚಿವ ರಘು ಶರ್ಮಾ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಗಾಯಾಳುಗಳನ್ನು ದಾಖಲಿಸಿದ್ದ ಎಸ್‌ಎಂಎಸ್ ಆಸ್ಪತ್ರೆಗೂ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ದುರಂತದ ವೇಳೆ ವಾಚ್ ಟವರ್ ಮೇಲೆ 27 ಜನರು ಇದ್ದರು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಮುಂಗಾರು ಮಳೆ ತಡೆದದ್ದು ಬರೀ 'ಎಲ್ ನಿನೊ' ಮಾತ್ರವಲ್ಲ ; ಇತರ 5 ಜಾಗತಿಕ ಹವಾಮಾನ ವೈಪರೀತ್ಯಗಳೂ ಕಾರಣ...!

ಅಮೆರ್ ಪ್ಯಾಲೆಸ್ ಬಳಿಯ ವಾಚ್ ಟವರ್ ಮೇಲೆ ಜನರು ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಕೆಲವರು ಸಿಡಿಲಿನ ಭಯಕ್ಕೆ ವಾಚ್ ಟವರ್ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement