ಇಬ್ಬರು ಕಂದಮ್ಮಗಳಿಗೆ ವಿಷ ನೀಡಿ ತಾನೂ ಕುಡಿದ ತಂದೆ, ಮಕ್ಕಳ ಸಾವು

posted in: ರಾಜ್ಯ | 0

ಬೆಳಗಾವಿ:ತಂದೆಯೊಬ್ಬ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಕುಡಿದ ಘಾನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ತಂದೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಈ ಬೆಳಗಾವಿ ತಾಲೂಕಿನ ಕೆ ಎಚ್ ಕಂಗ್ರಾಳಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮೃತ ಪುಟಾಣಿ ಮಕ್ಕಳನ್ನು ಅಂಜಲಿ(8), ಅನನ್ಯಾ(4) ಎಂದು ಗುರುತಿಸಲಾಗಿದೆ.
ವಿಜಯನಗರದ ನಿವಾಸಿಯಾಗಿರುವ ಅನಿಲ್ ಚಂದ್ರಕಾಂತ ಬಾಂದೇಕರ್(45) ತಂದೆ. ಈತ ಪುತ್ರಿಯರಿಗೆ ವಿಷ ಕುಡಿಸಿದ. ನಂತರ ತಾನೂ ಕುಡಿದ. ಪರಿಣಾಮ ಮಕ್ಕಳಿಬ್ಬರು ಮೃತಪಟ್ಟಿದ್ದು ತಂದೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅನಿಲ್ ಬಾಂದೇಕರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾನೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ