ಕೊರೊನಾ ನಿಯಂತ್ರಣ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ..!

ನವದೆಹಲಿ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ ಶ್ಲಾಘಿಸಿದ್ದಾರೆ. ಅಲ್ಲದೆ, ನಮ್ಮ ಆಸ್ಟ್ರೇಲಿಯಾದಲ್ಲೂ ಕೊರೊನಾ ಸಾಂಕ್ರಾಮಿಕ ನಿಯಂತ್ರಿಸಲು ನೀವು ಸಹಾಯ ಮಾಡಬಹುದೇ ಎಂದು ಕೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ಸಂಸದ ಕ್ರೇಗ್​ ಕೆಲ್ಲಿ, ಭಾರತದ ಉತ್ತರಪ್ರದೇಶದಲ್ಲಿ ಕೊರೊನಾ 2ನೇ ಅಲೆ ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ತುಂಬ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಕೊರೊನಾ ಸೋಂಕನ್ನು ತಡೆಗಟ್ಟಲು ಉತ್ತರ ಪ್ರದೇಶ ಐವರ್ಮೆಕ್ಟಿನ್​​ ಪರಿಚಯಿಸಿದ್ದು ನಿಜಕ್ಕೂ ಅತ್ಯುತ್ತಮ ಕೆಲಸ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್​ನಲ್ಲಿ, ನಮ್ಮಲ್ಲಿ ಮೊದಲಿದ್ದವರು ಸೃಷ್ಟಿಸಿದ ಅವ್ಯವಸ್ಥೆಯನ್ನು ಹೋಗಲಾಡಿಸಿ, ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸಲು ಉತ್ತರ ಪ್ರದೇಶದ ಜನರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ನಮಗೆ ಸಾಲ ಕೊಡಬಹುದಾ ಎಂದು ಪ್ರಶಂಸೆ ಮಾಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ