ಶೇ.30 ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನ

posted in: ರಾಜ್ಯ | 0

ಬೆಂಗಳೂರು: ರಾಜ್ಯಕ್ಕೆ ಕೊರೋನಾ ಕಾಲಿಟ್ಟ ನಂತರ ಶೈಕ್ಷಣಿಕ, ಆರ್ಥಿಕ, ಕೈಗಾರಿಕೆಗಳು, ಮೂಲಸೌಲಭ್ಯಗಳ ಅಭಿವೃದ್ದಿ ಸಂಪೂರ್ಣ ಕುಂಠಿತಗೊಂಡಿದೆ. ಶೈಕ್ಷಣಿಕ ವಿಷಯದಲ್ಲಂತೂ ವಿದ್ಯಾರ್ಥಿಗಳಿಗೆ, ಪಾಲಕರಿಗೆ ತೀರಾ ತೊಂದರೆಯಾಗಿದೆ.

ಕೊರೋನಾದಿಂದಾಗಿ ಇನ್ನೂ ಭೌತಿಕ ತರಗತಿಗಳು ಆರಂಭವಾಗದ ಹಿನ್ನಲೆಯಲ್ಲಿ ಈ ವರ್ಷವೂ ಪಠ್ಯ ಕಡಿತಕ್ಕೆ ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಕಳೆದ ವರ್ಷ ಆಫ್ ಲೈನ್ ತರಗತಿಗಳು ತಡವಾಗಿ ಆರಂಭವಾದ ಹಿನ್ನಲೆಯಲ್ಲಿ ಶೇ.30 ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಈ ವರ್ಷವೂ ಸಹ ಶೇ.30 ರಷ್ಟು ಪಠ್ಯ ಕಡಿತವಾಗಲಿದೆ.

ಕಳೆದ ವರ್ಷ ದ್ವಿತೀಯ ಪಿಯುಸಿ, ಎಸ್.ಎಸ್.ಎಲ್.ಸಿ. ಸೇರಿದಂತೆ ಎಲ್ಲಾ ಮಕ್ಕಳ ಪಠ್ಯ ಕಡಿತ ಮಾಡಲಾಗಿತ್ತು. ಇನ್ನೀಗ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯೂ ಸಹ ಶೇ.70 ಪಠ್ಯಕ್ಕೆ ಅನುಗುಣವಾಗಿಯೇ ನಡೆಯಲಿದೆ. 2021-22 ನೇ ವರ್ಷವೂ ಸಹ ವಿದ್ಯಾರ್ಥಿಗಳಿಗೆ ಶೇ.30 ರಷ್ಟು ಪಠ್ಯ ಕಡಿತ ಮುಂದುವರಿಯಲಿದೆ.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement