9 ಅಧಿಕಾರಿಗಳಿಗೆ ಎಸಿಬಿ ಶಾಕ್‌..ಬೆಳ್ಳಂಬೆಳಿಗ್ಗೆ 40 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರು: ರಾಜ್ಯದಲ್ಲಿ ಇಂದು (ಗುರುವಾರ) ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆದಿದೆ.
ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ಏಕಕಾಲಕ್ಕೆ ಶಿವಮೊಗ್ಗ, ದಾವಣಗೆರೆ, ಉಡುಪಿ, ಮಂಡ್ಯ,ಬೆಂಗಳೂರು ಸೇರಿದಂತೆ 40 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ದಾವಣೆಗೆರೆ ಜಿಲ್ಲಾ ನಗರಾಭಿವೃದ್ಧಿ ಸೆಲ್‌ನ ಇಇ ಜಿ.ಶ್ರೀಧರ್ ಕಚೇರಿ, ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ದಕ್ಷಿಣ ಕನ್ನಡ ಡಿಸಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಸೆಲ್‌ ಇಇ ಕೃಷ್ಣ ಎಸ್. ಹೆಬ್ಸೂರ್, ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿ., ಉಡುಪಿ ಕೆಆರ್‌ಐಡಿಸಿಎಲ್ (KRIDCL) ಮುಖ್ಯ ಇಂಜಿನಿಯರ್ ಆರ್.ಪಿ.ಕುಲಕರ್ಣಿ, ಮಾಲೂರು ನಗರ ಯೋಜನೆ ಸಹಾಯಕ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪ‌ ಅವರಿಗೆ ಎಸಿಬಿ ಬೆಳ್ಳಂಬೆಳಿಗಗೆ ಶಾಕ್ ಕೊಟ್ಟದೆ. ಬೀದರ್‌ ಪಂಚಾಯತ್ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ, ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್ ಟಿ.ವೆಂಕಟೇಶ್, ವಿಜಯಪುರ ಹೆಸ್ಕಾಂ ಎಇಇ ಸಿದ್ದರಾಮ ಮಲ್ಲಿಕಾರ್ಜುನ, ಇನ್ಸ್‌ಪೆಕ್ಟರ್ ಎ.ಕೃಷ್ಣಮೂರ್ತಿ, ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಎ.ಎನ್..ವಿಜಯ್‌ಕುಮಾರ್ ಸೇರಿ 9 ಅಧಿಕಾರಿಗಳಿಗೆ ಸೇರಿದ 40 ಕಡೆ ಎಸಿಬಿ ಅಧಿಕಾರಿಗಳು ‌ ದಾಳಿ ನಡೆಸಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ನಗರಸಭೆ ಯೋಜನಾ ನಿರ್ದೇಶಕ‌ ಹೆಚ್.ಆರ್.ಕೃಷ್ಣಪ್ಪ ಮನೆ, ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದ್ದು ದಾಖಲೆ ಹಾಗೂ ಆಸ್ತಿಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಹೆಚ್.ಆರ್.ಕೃಷ್ಣಪ್ಪನವರ ಶಿವಮೊಗ್ಗದ ಮನೆ ಮತ್ತು ಕಚೇರಿ ಸೇರಿ ಸುಮಾರು ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. 5 ಕಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ, ಆಸ್ತಿಪತ್ರ ಪರಿಶೀಲಿಸಿದ್ದಾರೆ.
ಮಂಗಳೂರಿನಲ್ಲೂ ಬೆಳ್ಳಂಬೆಳಗ್ಗೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ.ಶ್ರೀಧರ್ ನಿವಾಸ ‌ಮತ್ತು ಕಚೇರಿಯಲ್ಲಿ ಹುಡುಕಾಟ ನಡೆದಿದೆ.
ಬಳ್ಳಾರಿಯ ಹವಂಭಾವಿ ಪ್ರದೇಶದಲ್ಲಿರುವ ಜೆಸ್ಕಾಂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಎ.ಎನ್. ವಿಜಯ್ ಕುಮಾರ್​ರ ಮನೆ  ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್‌ ಟಿ.ವೆಂಕಟೇಶ್‌ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಮಂಡ್ಯದ ಸುಭಾಷ್ ನಗರದಲ್ಲಿರುವ ಡಿಸಿಎಫ್‌ ಟಿ.ವೆಂಕಟೇಶ್‌ ಮನೆಯ ಮೇಲೆ ದಾಳಿ ಮಾಡಲಾಗಿದೆ.
ಬೀದರ್‌ ಪಂಚಾಯತ್​ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ ಅವರ ಮನೆ, ಬೀದರ್ ಜಿಲ್ಲೆ ಬಸವಕಲ್ಯಾಣದ ಶಿವಾಜಿನಗರದಲ್ಲಿನ ಮನೆ, ಭಾಲ್ಕಿ ತಾಲೂಕಿನ ಮೋಹಕರ ಗ್ರಾಮದ ಮನೆ ಮೊಹ್ರೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement