ರಾಜ್ಯಗಳಿಗೆ ೭೫,೦೦೦ ಕೋಟಿ ರೂ. ಜಿಎಸ್ಟಿ ಪರಿಹಾರ ಬಿಡುಗಡೆ

ನವದೆಹಲಿ: ಜಿ.ಎಸ್.ಟಿ. ಆದಾಯದ ಕೊರತೆಯನ್ನು ಸರಿದೂಗಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ  ೭೫,೦೦೦ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಪರಿಹಾರ ನಿಧಿಯಲ್ಲಿ ಅಸಮರ್ಪಕ ಮೊತ್ತದ ಕಾರಣ ಪರಿಹಾರದ ಅಲ್ಪಾವಧಿಯ ಬಿಡುಗಡೆಯಿಂದಾಗಿ ಸಂಪನ್ಮೂಲ ಅಂತರವನ್ನು ಪೂರೈಸಲು ೧.೫೯ ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ಮೇ ೨೮ ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಜಿಎಸ್ ಟಿ ಪರಿಹಾರದ ಬದಲಾಗಿ ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಸಚಿವಾಲಯ ೭೫ ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಸೆಸ್ ಸಂಗ್ರಹದಿಂದ ಪ್ರತಿ ೨ ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್ಟಿ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಲ್ಲ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಹಾರ ಕೊರತೆಯ ಹಣವನ್ನು ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ ಒದಗಿಸುವ ವ್ಯವಸ್ಥೆಗೆ ಒಪ್ಪಿಕೊಂಡಿವೆ. ಬಾಕಿ ಮೊತ್ತವನ್ನು ೨೦೨೧-೨೨ರ ದ್ವಿತೀಯಾರ್ಧದಲ್ಲಿ ಸ್ಥಿರ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement