ಟೈಮ್ಸ್ ನೌ-ಸಿ ವೊಟರ್ ಉತ್ತರ ಪ್ರದೇಶ ಪೋಲ್ ಟ್ರ್ಯಾಕರ್: 43.1% ಜನರು ಬಿಜೆಪಿಯತ್ತ ಒಲವು, ಎಸ್‌ಪಿ ಕಡೆಗೆ29.6% ಜನರು.. ಯೋಗಿ ಸರ್ಕಾರದ ವಿರುದ್ಧ ಕೋಪವೂ ಜಾಸ್ತಿ

ಟೈಮ್ಸ್ ನೌ-ಸಿವೊಟರ್ ಉತ್ತರ ಪ್ರದೇಶ ಪೋಲ್ ಟ್ರ್ಯಾಕರ್ ಎ ಉತ್ತರ ಪ್ರದೇಶದ ಅಂಕಗಣಿತವು ಸದ್ಯಕ್ಕೆ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರವಾಗಿದ್ದಂತೆ ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ಬಹುತೇಕರು ಸಮೀಕ್ಷೆಯಲ್ಲಿ ಯೋಗ ಆದಿತ್ಯನಾಥ ಸರ್ಕಾರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

*ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ಷಮತೆಯಿಂದ 39.5% ರಷ್ಟು ತೃಪ್ತಿ ಹೊಂದಿಲ್ಲ

*48.7% ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಬದಲಾಗಬೇಕೆಂದು ಬಯಸಿದ್ದಾರೆ ಮತ್ತು ಕೋಪ ವ್ಯಕ್ತಪಡಿಸಿದ್ದಾರೆ

ನವದೆಹಲಿ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಟೈಮ್ಸ್ ನೌ-ಸಿ ವೋಟರ್‌ (Times Now-C Voter survey) ಸಮೀಕ್ಷೆಯು ರಾಜ್ಯದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಹೆಚ್ಚು ಬೆಂಬಲ ಸಿಕ್ಕಿದೆ.

ಇನ್ನೂ ಚುನಾವಣೆಗೆ ಏಳೆಂಟು ತಿಂಗಳು ಬಾಕಿಯಿದೆ. ಇದು ಟೈಮ್ಸ್ ನೌ-ಸಿ ವೊಟರ್ ಬಹಳ ಮೊದಲ ಸಮೀಕ್ಷೆಯಾಗಿದೆ. ಆದರೂ ಈ ಸಮೀಕ್ಷೆಯಲ್ಲಿ ಬಿಜೆಪಿಯತ್ತ ಜನರ ಒಲವು ಹೆಚ್ಚಿದೆ. ಜೊತೆಗೆ ಕೋಪವೂ ಹೆಚ್ಚಿದೆ.
ಸಮೀಕ್ಷೆಯಲ್ಲಿ ಶೇ 43.1 ರಷ್ಟು ಜನರು ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ ಎಂದು ಕಂಡುಬಂದಿದೆ. ಮತ್ತು ಶೇಕಡಾ 29.6 ರಷ್ಟು ಜನರು ಸಮಾಜವಾದಿ ಪಕ್ಷ (ಎಸ್‌ಪಿ) ಎಂದು ಕಂಡುಬಂದಿದೆ.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಶೇ 10.1 ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ, ಕಾಂಗ್ರೆಸ್ ಪಕ್ಷವು 8.1 ಶೇಕಡಾ, 3.2 ಶೇಕಡಾ ಇತರರನ್ನು ಆಯ್ಕೆ ಮಾಡುತ್ತದೆ, ಶೇ.3.1 ಅತಂತ್ರ ವಿಧಾನಸಭೆ ಮತ್ತು 2.8 ಶೇಕಡಾ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
403 ಸದಸ್ಯರನ್ನು ಆಯ್ಕೆ ಮಾಡಲು ಉತ್ತರಪ್ರದೇಶದಲ್ಲಿ 2022 ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಬಹುದಾಗಿದೆ. ಯಾಕೆಂದರೆ 2017 ರಲ್ಲಿ ಚುನಾಯಿತರಾದ ಪ್ರಸ್ತುತ ವಿಧಾನಸಭೆಯ ಅವಧಿ ಮಾರ್ಚ್ 14, 2022 ಕ್ಕೆ ಮುಕ್ತಾಯಗೊಳ್ಳುತ್ತದೆ.
ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಪ್ರಶ್ನಿಸಿದಾಗ, ಶೇಕಡಾ 31.7 ರಷ್ಟು ಜನರು ಸರ್ಕಾರ ಉತ್ತಮವೆಂದು ಹೇಳಿದ್ದಾರೆ, 23.4 ಶೇಕಡಾ ಜನರು ಸರಾಸರಿ ಎಂದು ಹೇಳಿದ್ದಾರೆ ಮತ್ತು 39.5 ರಷ್ಟು ಜನರು ಇದು ಕಳಪೆ ಎಂದು ಭಾವಿಸಿದ್ದಾರೆ.
ಮತದಾರರು ‘ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಕೋಪಗೊಂಡಿದ್ದಾರೆ ಮತ್ತು ಸರ್ಕಾರ ಬದಲಾಗಬೇಕೆಂದು ಬಯಸುತ್ತೀರಾ’ ಎಂದು ಕೇಳಿದಾಗ, ಶೇಕಡಾ 48.7 ರಷ್ಟು ಜನರು ಕೋಪಗೊಂಡಿದ್ದಾರೆ ಮತ್ತು ಬದಲಾವಣೆ ಬಯಸುತ್ತಾರೆ ಎಂದು ಹೇಳಿದ್ದಾರೆ, 27.9 ಶೇಕಡಾ ಜನರು ಕೋಪಗೊಂಡಿದ್ದಾರೆ ಆದರೆ ಬದಲಾವಣೆ ಬಯಸುವುದಿಲ್ಲ . ಶೇಕಡಾ 23.4 ರಷ್ಟು ಜನರು ಸರ್ಕಾರದ ಮೇಲೆ ಕೋಪಗೊಳ್ಳುವುದಿಲ್ಲ ಮತ್ತು ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
‘ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಹೆಚ್ಚು ಯೋಗ್ಯ ಅಭ್ಯರ್ಥಿ ಯಾರು?..:’
‘ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಹೆಚ್ಚು ಯೋಗ್ಯ ಅಭ್ಯರ್ಥಿ ಯಾರು?’ ಎಂದು ಕೇಳಿದಾಗ, 42.2 ರಷ್ಟು ಮಂದಿ ಯೋಗಿ ಆದಿತ್ಯನಾಥ್, 32.2 ಶೇಕಡಾ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಲು ಬಯಸುತ್ತಾರೆ, 17% ಬಿಎಸ್ಪಿ ಮುಖ್ಯಸ್ಥ ಮಾಯಾವತಿ ಮತ್ತು ಕೇವಲ ಶೇಕಡಾ 2.9 ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ಅವರು ಈ ಹುದ್ದೆಗೆ ಉತ್ತಮ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯೊಂದಿಗೆ ಜನರ ತೃಪ್ತಿಯಿದೆಯೇ ಎಂದು ಕೇಳಿದ ಪ್ರಶ್ನೆಗೆ, 44.7 ಶೇಕಡಾ ಅವರ ಸಾಧನೆ ಉತ್ತಮವಾಗಿದೆ ಎಂದು ಹೇಳಿದ್ದಾರೆ, 19.7 ಶೇಕಡಾ ಜನರು ಅದನ್ನು ಸರಾಸರಿ ಎಂದು ಕರೆದರೆ, 35.6 ರಷ್ಟು ಜನರು ಕಳಪೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement