ಮೊಬೈಲ್ ಬ್ಲಾಸ್ಟ್: ಬಾಲಕನ ಬೆರಳುಗಳು ಕಟ್, ಕಣ್ಣಿಗೆ ಗಂಭೀರ ಗಾಯ..!

posted in: ರಾಜ್ಯ | 0

ಹಾವೇರಿ: ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚಿಗೆ ಬಿದ್ದ ಬಾಲಕನೊಬ್ಬ ಮೂರು ಬೆರಳನ್ನೇ ಕಳೆದುಕೊಂಡಿದ್ದಾನೆ. ಮೊಬೈಲ್ ಬ್ಲಾಸ್ಟ್ ಆಗಿ ಬಾಲಕನ ಬಲಗೈಯಲ್ಲಿನ ಮೂರು ಬೆರಳುಗಳೇ ಕಟ್ ಆಗಿವೆ. ಬ್ಲಾಸ್ಟ್ ಆಗಿದ್ದ ಹೊಡೆತಕ್ಕೆ ಬಾಲಕನ ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಮನೆಯಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಚಾರ್ಜ್ ಹಾಕಿದ್ದ ಮೊಬೈಲ್ ನಲ್ಲಿ ಕಾರ್ತಿಕ ಗೇಮ್​​​ ಆಡುತ್ತಿದ್ದನಂತೆ. ಆಗ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಬಾಲಕನ ಬಲಗೈಯಲ್ಲಿನ ಮೂರು ಬೆರಳುಗಳು ಕಟ್ ಆಗಿವೆ. ಅಲ್ಲದೆ ಎದೆಯ ಭಾಗಕ್ಕೆ ಅಲ್ಲಲ್ಲಿ ಗಾಯಗಳಾಗಿವೆ. ಸ್ಫೋಟದಿಂದ ಮುಖಕ್ಕೂ ಗಾಯಗಳಾಗಿದ್ದು, ಬಲಗಣ್ಣಿಗೂ ಗಾಯವಾಗಿದೆ. ಬಾಲಕನನ್ನ ಸವಣೂರು ತಾಲೂಕು ಸರಕಾರಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಬೈಲ್ ಸ್ಫೋಟದ ಸುದ್ದಿ ಕೇಳಿ ಪಕ್ಕದ ಮನೆಯವರು ಗಾಬರಿಗೊಂಡಿದ್ದಾರೆ.
ಮಕ್ಕಳಿಗೆ ಮೊಬೈಲ್ ನೀಡೋವಾಗ ಅಥವಾ ಮಕ್ಕಳು ಮೊಬೈಲ್​​​ನಲ್ಲಿ ಆಟವಾಡುವಾಗ ಎಚ್ಚರ ವಹಿಸಬೇಕಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ