ಕುಮಟಾದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ: ರಾತ್ರಿಯೇ ಬಂದು ಕ್ಯೂ ನಿಂತರೂ ಜನರಿಗೆ ಸಿಗುತ್ತಿಲ್ಲ ಲಸಿಕೆ..!

ಕುಮಟಾ;ತಾಲೂಕಿನಲ್ಲಿ ಕೊರೊನಾ ಲಸಿಕೆ ಕೊರತೆಯು ಜನರನ್ನು ಹೈರಾಣ ಮಾಡಿದೆ. ಮೊದಲ ಡೋಸ್‌ ಮುಗಿದು ೮೫ ರಿಂದ ೯೦ ದಿನವಾದರೂ ಎರಡನೆ ಡೋಸ್ ಸಿಗದೆ ಜನರು ಪರದಾಡುತ್ತಿದ್ದಾರೆ.
ಮಧ್ಯರಾತ್ರಿ ೨ ಘಂಟೆಯಿಂದ ಸರಕಾರಿ ಆಸ್ಪತ್ರೆಯ ಹೊರಗೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕೆಲವು ವೃದ್ಧರು ಕ್ಯೂನಲ್ಲಿ ನಿಲ್ಲಲು ಆಗದೆ ಕುಳಿತುಕೊಳ್ಳಲು ಸಾಧ್ಯವಾಗದೆ ತೊಳಲಾಡುತ್ತಿರುವ ಪರಿಸ್ಥಿತಿ ಕನಿಕರ ತರುತ್ತಿದೆ. ಸರ್ಕಾರದಿಂದ ಕುಮಟಾಕ್ಕೆ ಪುರೈಕೆಯಾಗುತ್ತಿರುವ ವ್ಯಾಕ್ಸಿನ್ ಪ್ರಮಾಣ ಅತ್ಯಂತ ಕಡಿಮೆ ಇರುವುದು ಇದಕ್ಕೆ ಕಾರಣವಾಗಿದೆ. ಪ್ರತಿ ನಿತ್ಯ ೫೦ ರಿಂದ ೨೦೦ ರಷ್ಟು ವ್ಯಾಕ್ಸಿನ್ ಪೂರೈಕೆಯಾಗುತ್ತಿದ್ದು, ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ.
ಕ್ಯೂದಲ್ಲಿ ತಳ್ಳಾಟ-ದೂಡಾಟವು ನಡೆಯುತ್ತಿದೆ. ಇದರಿಂದ ಕೊರೊನಾ ಪ್ರಕರಣ ಹೆಚ್ಚಾಗುವ ಆತಂಕವೂ ಎದುರಾಗಿದೆ. ಸೋಜಿಗದ ವಿಷಯವೆಂದರೆ ಪ್ರಥಮ ಡೋಸ್ ಪಡೆದವರಿಗೆ ಕೇಂದ್ರದ ಕೋವಿಡ್ ಕಚೇರಿಯಿಂದ ೮೪ ದಿನವಾದವರಿಗೆ ಎರಡನೆ ಡೋಸ್ ಹಾಕಿಕೊಳ್ಳಲು ಎಸ್ಎಂಎಸ್ ಬಂದಿರುತ್ತದೆ. ಇದು ಆಸ್ಪತ್ರೆಯ ಆಡಳಿತದ ಗಮನಕ್ಕೆ ಬರುವದಿಲ್ಲ.

ಈ ಎಲ್ಲ ಗೊಂದಲಗಳ ನಡುವೆ ರಾತ್ರಿಯಿಡೀ ಕ್ಯೂನಲ್ಲಿ ನಿಂತು ಟೋಕನ್‌ ಸಿಗದೆ ಮತ್ತೆ ಮರುದಿವಸ ಸರತಿ ಸಾಲಿಗಾಗಿ ಕಾಯುವ ಪರಿಸ್ಥಿತಿ ಬಬಂದಿದೆ. ಪುನಃ ಅದೇ ಗೋಳು, ನೋ ವ್ಯಾಕ್ಸಿನ್. . ಶನಿವಾರದಂದು ಆಸ್ಪತ್ರೆಗೆ ಹೊದವರು ಇಂದು ಯಾವುದೇ ಲಸಿಕೆ ಲಭ್ಯವಿಲ್ಲ ಎನ್ನುವ ಫಲಕ ನೇತುಹಾಕಿರುವುದನ್ನು ನೋಡಿ ಮನೆಗೆ ತೆರಳಿದ್ದಾರೆ.
ಎರಡನೆ ಡೋಸ್ ನೀಡುವಷ್ಟು ಕನಿಷ್ಟ ಸಂಖ್ಯೆಯ ಕೋವಿಶೀಲ್ಡ್‌ ಲಸಿಕೆ ಬರುತ್ತಿಲ್ಲ ಪ್ರಥಮ ಲಸಿಕೆ ಹಾಕುವುದನ್ನು ಆಸ್ಪತ್ರೆಯಲ್ಲಿ ನಿಲ್ಲಿಸಲಾಗಿದೆ .ಇದೆಲ್ಲದರ ಮಧ್ಯ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಕುಮಟಾದ ಸರ್ಕಾರಿ ಆಸ್ಪತ್ರೆ ಅತ್ಯಂತ ಸುಸಜ್ಜಿತ ಹಾಗೂ ಅತ್ಯಂತ ಸ್ವಚ್ಛವಾಗಿದೆ. ಅತ್ಯುತ್ತಮ ಗುಣಮಟ್ಟದ ವೈದ್ಯರು ಇದ್ದು ನಿರಂತರ ಸಾರ್ವಜನಿಕ ಸೇವೆಯಲ್ಲಿರುತ್ತಾರೆ. ಕೊರೋನಾ ಪೀಡಿತರನ್ನು ಗುಣಮುಖ ಮಾಡುವಲ್ಲಿ ಸಾರ್ವಜನಿಕ ಮನ್ನಣೆ ಪಡೆದ ವೈದ್ಯರಿದ್ದಾರೆ. ಆದರೆ ಕೊರೊನಾ ಲಸಿಕೆ ಕೊರತೆಯಿಂದ ಆಸ್ಪತ್ರೆ ಆಡಳಿತಕ್ಕೆ ಜನರು ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕನಿಷ್ಟ ಮಟ್ಟದ ಯೋಜನೆಯನ್ನಾದರೂ ರೂಪಿಸಿ ಹಿಂದಿನ ದಿನವೇ ಮರುದಿವಸ ಎರಡನೆ ಡೋಸ್ ಪಡೆಯುವವರ ಹೆಸರನ್ನು ನೊಂದಾಯಿಸಿಕೊಂಡಲ್ಲಿ ರಾತ್ರಿ ಜಾಗರಣೆ ತಪ್ಪಿಸಬಹುದು ಎನ್ನುವ ಸಾರ್ವತ್ರಿಕ ಅಭಿಪ್ರಾಯವಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement