ಟಾಟಾ ಪವರ್ – ಎಚ್​ಪಿಸಿಎಲ್​ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್

ದೇಶದ ಪ್ರಮುಖ ನಗರಗಳು ಹಾಗೂ ಮುಖ್ಯ ಹೆದ್ದಾರಿಗಳಲ್ಲಿ ಇರುವ ಸಾರ್ವಜನಿಕ ಸ್ವಾಮ್ಯದ ರೀಟೇಲ್ ಔಟ್​ಲೆಟ್​ಗಳಲ್ಲಿ ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಟಾಟಾ ಪವರ್ ಕಂಪೆನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್​ಪಿಸಿಎಲ್​) ಜೊತೆಗೆ ಸಹಯೋಗ ನೀಡಲಿದೆ.
ಎಲೆಕ್ಟ್ರಿಕ್ ಯುಟಿಲಿಟಿ ಕಂಪೆನಿಗಳ “ಇ ಝೆಡ್ ಚಾರ್ಜ್ ಮೊಬೈಲ್” ಪ್ಲಾಟ್​ಫಾರ್ಮ್​ ಮೂಲಕ ಚಾರ್ಜಿಂಗ್ ಮಾಡಲಾಗುತ್ತದೆ. ಕಂಪೆನಿಯು ಹೇಳಿಕೊಳ್ಳುವಂತೆ, ಇದು ಗ್ರಾಹಕರಿಗೆ ತಡೆರಹಿತವಾದ ಅನುಭವ ದೊರಕಿಸುತ್ತದೆ.
ದೇಶದುದ್ದಕ್ಕೂ ಇರುವ ಎಚ್​ಪಿಸಿಸಿಎಲ್​ ಪೆಟ್ರೋಲ್​ ಬಂಕ್​ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್​ ಮಾಡಿಕೊಳ್ಳಲು ಅನುಕೂಲ ಆಗುವಂತೆ ಎಚ್​ಪಿಸಿಎಲ್​ ಜತೆಗೆ ಸಹಯೋಗ ವಹಿಸುತ್ತಿದ್ದೇವೆ ಎಂದು ಟಾಟಾ ಪವರ್ ಖಾತ್ರಿ ಪಡಿಸಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮಾಲೀಕರನ್ನು ವಾಹನ ಖರೀದಿಗೆ ಉತ್ತೇಜಿಸಿದಂತಾಗುತ್ತದೆ. ದೇಶದಾದ್ಯಂತ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡುವುದು ಹೆಚ್ಚಾಗುತ್ತದೆ ಎನ್ನಲಾಗಿದೆ.
ದೇಶದಾದ್ಯಂತ ಇರುವ ವಿವಿಧ ಎಚ್​ಪಿಸಿಸಿಎಲ್​ ಪೆಟ್ರೋಲ್​ ಬಂಕ್​ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್​ ಮಾಡಿಕೊಳ್ಳಲು ಅನುಕೂಲ ಆಗುವಂತೆ ಎಚ್​ಪಿಸಿಎಲ್​ ಜತೆಗೆ ಸಹಯೋಗ ವಹಿಸುತ್ತಿದ್ದೇವೆ ಎಂದು ಟಾಟಾ ಪವರ್ ಖಾತ್ರಿ ಮಾಡಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮಾಲೀಕರನ್ನು ವಾಹನ ಖರೀದಿಗೆ ಉತ್ತೇಜಿಸಿದಂತಾಗುತ್ತದೆ. ದೇಶದಾದ್ಯಂತ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡುವುದು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸುಸ್ಥಿರ ಸಂಚಾರವನ್ನು ಹಂಚಿಕೊಳ್ಳುವ ಎಚ್​ಪಿಸಿಎಲ್​ ಜತೆಗೆ ಸಹಭಾಗಿತ್ವ ವಹಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಈ ವ್ಯೂಹಾತ್ಮಕ ಸಹಭಾಗಿತ್ವವು ಎಚ್​ಪಿಸಿಎಲ್​ಗೆ ರೀಟೇಲ್ ಬೇಸ್, ಅದರಲ್ಲೂ ವಿಶೇಷವಾಗಿ ನಗರಗಳು ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ಒದಗಿಸುತ್ತದೆ ಎಂದು ಟಾಟಾ ಪವರ್ ಇವಿ ಚಾರ್ಜಿಂಗ್ ಪ್ರಮುಖರಾದ ಸಂದೀಪ್ ಬಂಗಿಯಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್​ (NEMMP) ತಕ್ಕಂತೆ ಈ ಸಹಭಾಗಿತ್ವ ಇದೆ ಎಂದು ಹೇಳಲಾಗಿದೆ.
ಎಚ್​ಪಿಸಿಎಲ್​ನದು 18,000 ರೀಟೇಲ್ ಔಟ್​ಲೆಟ್​ಗಳಿವೆ. ಈಗ ಟಾಟಾ ಪವರ್ ಕೂಡ ಅದರಜೊತೆಯಾಗುತ್ತಿದೆ. ಇದು ಎಲೆಕ್ಟ್ರಿಕ್ ಚಾರ್ಜಿಂಗ್ ಸೆಗ್ಮೆಂಟ್​ನಿಂದಾಗಿ ಇದರಿಂದಾಗಿ ಅಖಿಲ ಭಾರತ ಮಟ್ಟದ ಚಾರ್ಜಿಂಗ್ ಎಕೋಸಿಸ್ಟಮ್ ಮತ್ತು ಎಂಡ್-ಟು-ಎಂಡ್ ಸಲ್ಯೂಷನ್ಸ್ ಉತ್ತೇಜಿಸುತ್ತದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement