ದೇಶದ ಪ್ರಮುಖ ನಗರಗಳು ಹಾಗೂ ಮುಖ್ಯ ಹೆದ್ದಾರಿಗಳಲ್ಲಿ ಇರುವ ಸಾರ್ವಜನಿಕ ಸ್ವಾಮ್ಯದ ರೀಟೇಲ್ ಔಟ್ಲೆಟ್ಗಳಲ್ಲಿ ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಟಾಟಾ ಪವರ್ ಕಂಪೆನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಜೊತೆಗೆ ಸಹಯೋಗ ನೀಡಲಿದೆ.
ಎಲೆಕ್ಟ್ರಿಕ್ ಯುಟಿಲಿಟಿ ಕಂಪೆನಿಗಳ “ಇ ಝೆಡ್ ಚಾರ್ಜ್ ಮೊಬೈಲ್” ಪ್ಲಾಟ್ಫಾರ್ಮ್ ಮೂಲಕ ಚಾರ್ಜಿಂಗ್ ಮಾಡಲಾಗುತ್ತದೆ. ಕಂಪೆನಿಯು ಹೇಳಿಕೊಳ್ಳುವಂತೆ, ಇದು ಗ್ರಾಹಕರಿಗೆ ತಡೆರಹಿತವಾದ ಅನುಭವ ದೊರಕಿಸುತ್ತದೆ.
ದೇಶದುದ್ದಕ್ಕೂ ಇರುವ ಎಚ್ಪಿಸಿಸಿಎಲ್ ಪೆಟ್ರೋಲ್ ಬಂಕ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಅನುಕೂಲ ಆಗುವಂತೆ ಎಚ್ಪಿಸಿಎಲ್ ಜತೆಗೆ ಸಹಯೋಗ ವಹಿಸುತ್ತಿದ್ದೇವೆ ಎಂದು ಟಾಟಾ ಪವರ್ ಖಾತ್ರಿ ಪಡಿಸಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮಾಲೀಕರನ್ನು ವಾಹನ ಖರೀದಿಗೆ ಉತ್ತೇಜಿಸಿದಂತಾಗುತ್ತದೆ. ದೇಶದಾದ್ಯಂತ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡುವುದು ಹೆಚ್ಚಾಗುತ್ತದೆ ಎನ್ನಲಾಗಿದೆ.
ದೇಶದಾದ್ಯಂತ ಇರುವ ವಿವಿಧ ಎಚ್ಪಿಸಿಸಿಎಲ್ ಪೆಟ್ರೋಲ್ ಬಂಕ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಅನುಕೂಲ ಆಗುವಂತೆ ಎಚ್ಪಿಸಿಎಲ್ ಜತೆಗೆ ಸಹಯೋಗ ವಹಿಸುತ್ತಿದ್ದೇವೆ ಎಂದು ಟಾಟಾ ಪವರ್ ಖಾತ್ರಿ ಮಾಡಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮಾಲೀಕರನ್ನು ವಾಹನ ಖರೀದಿಗೆ ಉತ್ತೇಜಿಸಿದಂತಾಗುತ್ತದೆ. ದೇಶದಾದ್ಯಂತ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡುವುದು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸುಸ್ಥಿರ ಸಂಚಾರವನ್ನು ಹಂಚಿಕೊಳ್ಳುವ ಎಚ್ಪಿಸಿಎಲ್ ಜತೆಗೆ ಸಹಭಾಗಿತ್ವ ವಹಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಈ ವ್ಯೂಹಾತ್ಮಕ ಸಹಭಾಗಿತ್ವವು ಎಚ್ಪಿಸಿಎಲ್ಗೆ ರೀಟೇಲ್ ಬೇಸ್, ಅದರಲ್ಲೂ ವಿಶೇಷವಾಗಿ ನಗರಗಳು ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ಒದಗಿಸುತ್ತದೆ ಎಂದು ಟಾಟಾ ಪವರ್ ಇವಿ ಚಾರ್ಜಿಂಗ್ ಪ್ರಮುಖರಾದ ಸಂದೀಪ್ ಬಂಗಿಯಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್ (NEMMP) ತಕ್ಕಂತೆ ಈ ಸಹಭಾಗಿತ್ವ ಇದೆ ಎಂದು ಹೇಳಲಾಗಿದೆ.
ಎಚ್ಪಿಸಿಎಲ್ನದು 18,000 ರೀಟೇಲ್ ಔಟ್ಲೆಟ್ಗಳಿವೆ. ಈಗ ಟಾಟಾ ಪವರ್ ಕೂಡ ಅದರಜೊತೆಯಾಗುತ್ತಿದೆ. ಇದು ಎಲೆಕ್ಟ್ರಿಕ್ ಚಾರ್ಜಿಂಗ್ ಸೆಗ್ಮೆಂಟ್ನಿಂದಾಗಿ ಇದರಿಂದಾಗಿ ಅಖಿಲ ಭಾರತ ಮಟ್ಟದ ಚಾರ್ಜಿಂಗ್ ಎಕೋಸಿಸ್ಟಮ್ ಮತ್ತು ಎಂಡ್-ಟು-ಎಂಡ್ ಸಲ್ಯೂಷನ್ಸ್ ಉತ್ತೇಜಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ