ಜೀರೋ ಟ್ರಾಫಿಕ್ ನಲ್ಲಿ ಎಸ್ ಡಿಎಂನಿಂದ ತತ್ವದರ್ಶ ಆಸ್ಪತ್ರೆಗೆ ಕಿಡ್ನಿ ಸ್ಥಳಾಂತರ

ಹುಬ್ಬಳ್ಳಿ: ಧಾರವಾಡದ ಎಸ್.ಡಿಎಂ ಆಸ್ಪತ್ರೆಯವರ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಇಂದು (ಭಾನುವಾರ) ಎಸ್.ಡಿ.ಎಂ ಆಸ್ಪತ್ರೆಯಿಂದ ”ಮೂತ್ರಪಿಂಡ” (Kidney)ವನ್ನು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ 12 ಕಿ.ಮೀ ಅಂತರವನ್ನು 07 ನಿಮಿಷಗಳಲ್ಲಿ ಜೀರೋ ಟ್ರಾಫಿಕ್‌ ಮೂಲಕ ಸಾಗಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆ ನೀಡಲಾಯಿತು.
ಸುರಿಯುತ್ತಿದ್ದ ಮಳೆಯಲ್ಲಿಯೇ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಾದ ಎಂ.ಎಸ್. ಹೊಸಮನಿ, ಶ್ರೀಕಾಂತ್ ತೋಟಗಿ, ಎಂ.ಎಸ್.ನಾಯ್ಕರ ಹಾಗೂ ಎಲ್ಲ ಸಿಬ್ಬಂದಿ ವರ್ಗದವರಿಗೆ ಮತ್ತು ಜೀರೋ ಟ್ರಾಫಿಕ್ ಗೆ ಸಹಕರಿಸಿದ ನಾಗರಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಕಮೀಷನರೇಟ್ ವತಿಯಿಂದ ಧನ್ಯವಾದ ತಿಳಿಸಿದ್ದಾರೆ.
ಧಾರವಾಡದ ಎಸ್.ಡಿಎಂ ಆಸ್ಪತ್ರೆಯಿಂದ ಉಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ಮೂತ್ರಪಿಂಡ”(ಕಿಡ್ನಿ) ಅತಿ ಕ್ಷಿಪ್ರವಾಗಿ ಸಾಗಿಸಬೇಕಿತ್ತು. ಅದಕ್ಕೆ ಬೇಕಾದ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಯಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement