
ಬೆಂಗಳೂರು: ಮುಂಬಡ್ತಿ ನಿರೀಕ್ಷೆಯಲ್ಲಿದ್ದ ರಾಜ್ಯದ ೮೦ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರಕಾ ಹಿಂಬಡ್ತಿ ನೀಡಿದೆ.

ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ೨೫ ವರ್ಷಗಳಿಂದ ಬೋಧಿಸುತ್ತಿರುವ ಪದವೀಧರ ಶಿಕ್ಷಕರಿಗೆ ಹಿಂಬಡ್ತಿಯಾಗಿದೆ.
ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮ ಬದಲಿಸಿದ ಕಾರಣದಿಂದ ಮುಂಬಡ್ತಿ ನಿರೀಕ್ಷೆಯಲ್ಲಿದ್ದ ರಾಜ್ಯದ ೮೦ ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಇದರಿಂದ ತೊಂದರೆಯಾಗಿದೆ ಎನ್ನಲಾಗಿದೆ.
೨೦೧೬ಕ್ಕೂ ಮೊದಲು ನೇಮಕಾತಿಯಾದ ೧ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರುಗಳಲ್ಲಿ ಮೂಲ ವೃಂದದ ೧.೬೦ ಲಕ್ಷ ಶಿಕ್ಷಕರಲ್ಲಿ ೮೦ ಸಾವಿರಕ್ಕೂ ಅಧಿಕ ಶಿಕ್ಷಕರು ಪದವಿ ವಿದ್ಯಾರ್ಹತೆ ಮತ್ತು ೨೦ ರಿಂದ ೨೫ ವರ್ಷ ಸೇವಾನುಭವ ಹೊಂದಿದ್ದಾರೆ. ಆದರೆ ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ಮುಂಬಡ್ತಿಗೆ ಕಡೆಗಣಿಸಲಾಗಿದೆ. ಶಿಕ್ಷಕರನ್ನು ೧ ರಿಂದ ೫ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ವರ್ಗೀಕರಿಸಿರುವುದರಿಂದ ರಾಜ್ಯದ ೮೦ ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಿಂಬಡ್ತಿ ಶಿಕ್ಷ ಅನುಭವಿಸುವಂತಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ