ಪರಿಸರ ರಕ್ಷಣೆಗಾಗಿ ಕಪ್ಪತ್ತಗಿರಿಯಲ್ಲಿ ಜನಪದ ಕಲೆ ಮೂಲಕ ಜನಜಾಗೃತಿ

posted in: ರಾಜ್ಯ | 0

ಗದಗ: ಕಪ್ಪತ್ತಗುಡ್ಡದ ರಮಣೀಯ ರಸ ದೌತಣ ಸವಿಯಲು ಬರುವ ಪ್ರವಾಸಿಗರಿಗೆ ಮುಂಡರಗಿ ತಾಲೂಕಿನ  ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠ ಹಾಗೂ ಸಂಗಡಿಗರು ಕಪ್ಪತ್ತಗುಡ್ಡದಲ್ಲಿ ಸ್ವಚ್ಚತೆ ಕಾಪಾಡಲು ಹಾಗೂ ಗುಡ್ಡದ ಮಹತ್ವ ಸಾರುವ ನಿಟ್ಟಿನಲ್ಲಿ ಅನೇಕ ಜನಪದ ಜಾಗೃತಿ ಗೀತೆ  ಹೇಳುವದರ ಮೂಲಕ ಬಂದ ಪ್ರವಾಸಿಗರಿಗೆ ಅರಿವು ಮೂಢಿಸಿದರು.

ಅನೇಕ ಸಸ್ಯ ಔಷಧಿ ಸಸ್ಯಗಳ ಕಾಶಿ ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರು ನಸುಕಿನ ಜಾವ ಇಬ್ಬನಿಯಿಂದ ಕೂಡಿದ ಉತ್ತರ ಕರ್ನಾಟಕದ ಸಂಹಾದ್ರಿ ನೋಡಲು ಕಿಕ್ಕಿರಿದು ಜನ ಬರುತ್ತಿದ್ಧಾರೆ.

ಕಳೆದ ೩ ತಿಂಗಳಿನಿಂದ ಕಪ್ಪತ್ತಗುಡ್ಡ ನೋಡಲು ಬರುವ ಪ್ರವಾಸಿಗರು ಸುತ್ತಲೂ ಮೋಜು ಮಸ್ತಿ ಮಾಡುತ್ತ ಅನೈತಿಕ ಚಟುವಟಿಕೆಗಳನ್ನು ಮಾಡುವದಲ್ಲದೇ ಬೇಕಾಬಿಟ್ಟಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ, ಇದರಿಂದ ಪರಿಸರ ಮಾಲಿನ್ಯ ವಾಗುತ್ತದೆ. ಇದನ್ನರಿತ ಜನಪದ ಕಲಾವಿದ ಗವಿಶಿದ್ಧಯ್ಯ   ಹಳ್ಳಿಕೇರಿಮಠ ತಮ್ಮ ಕಲಾ ತಂಡದೊಂದಿಗೆ ಕಪ್ಪತ್ತಗುಡ್ಡದಲ್ಲಿ ಬಂದ ಪ್ರವಾಸಿಗರಿಗೆ   ಜನಪದ ಗೀತೆಗಳ  ಜಾಗೃತಿ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ಧಾರೆ.

ಉಳಿಸಿ ಬೆಳೆಸಿ ಕಪ್ಪತ್ತಗುಡ್ಡ, ಪರಿಸರ ಜಾಗೃತಿಗಾಗಿ ಆಗೋಣ ಬದ್ಧ, ಕೇಳಿರಿ ಕೇಳಿರಿ ನಾಡಿನ ಜನಗಳೆ ಕಪ್ಪತ್ತಗುಡ್ಡದ ವೈಭವ, ಅನ್ನುವಂತಹ ಮುಂತಾದ ಕಪ್ಪತ್ತಗುಡ್ಡದ ಜಾಗೃತಿ ಗೀತೆಗಳನ್ನು ಹಾಡಿದರು.

ತೋಟೇಶ ಬೆಳದಡಿ, ಪರಶುರಾಮ ಅಳವುಂಡಿ, ರಮೇಶ ಅಳವುಂಡಿ, ರಾಜು ಹುಬ್ಬಳ್ಳಿ, ಶಾಂತವೀರೇಶ ಕೋಣಿ,  ಸೇರಿದಂತೆ ಅನೇಕರು ಪಾಲ್ಗೊಂಡಿದ್ಧರು.

 

 

 

 

 

 

 

 

 

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ