ಕಾರವಾರ: ಬಲೆಗೆ ಬಿದ್ದ 19 ಕೆಜಿ ತೂಕದ ಕುರಡೆ ಮೀನು

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ವೇಳೆ 19 ಕೆಜಿ ತೂಕದ ಕುರಡೆ ಮೀನು ಬಲೆಗೆ ಸೋಮವಾರ ಸಿಕ್ಕಿಬಿದ್ದಿದೆ.

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತಿದ್ದರಿಂದ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. ಆದರೆ ಸೋಮವಾರ ಮಳೆ ಕೊಂಚ ವಿರಾಮ ನೀಡಿದ ವೇಳೆಯಲ್ಲಿ ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಪದ್ಧತಿಯಲ್ಲಿ ಮೀನುಗಾರಿಕೆ ಮಾಡುವಾಗ ಭಾರೀ ಗಾತ್ರದ ಕುರಡೆ ಮೀನು ಸಿಲುಕಿದೆ. ಇದರಿಂದ ಮೀನುಗಾರರು ಖುಷಿ ಆಗಿದ್ದಾರೆ. ಈ ಮೀನು ಹಿಡಿಯುತ್ತಿದ್ದಂತೆ ಇದನ್ನು ಗಮನಿಸಿದವರು ಇದಕ್ಕೆ ಒಟ್ಟೂ 8 ಸಾವಿರ ರೂ. ನೀಡಿ ಖರೀದಿ ಮಾಡಿದರು.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

ನಿಮ್ಮ ಕಾಮೆಂಟ್ ಬರೆಯಿರಿ

advertisement