ಕುಮಟಾ: ಗೋರೆಯಲ್ಲಿ ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜ್ ಕಟ್ಟಡ ಉದ್ಘಾಟನೆ

posted in: ರಾಜ್ಯ | 0

ಕುಮಟಾ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉತ್ಕೃಷ್ಟ ಶಿಕ್ಷಣದ ಜೊತೆ ವಿದ್ಯಾರ್ಥಿಗಳು ರಾಷ್ಟ್ರಭಕ್ತರಾಗಿ ದೇಶಕ್ಕೆ ಆಸ್ತಿಯಾಗಬೇಕು ಎಂದು ಆರ್.ಎಸ್.ಎಸ್. ಹಿರಿಯ ಪ್ರಚಾರಕರಾದ ಸು. ರಾಮಣ್ಣ  ಕರೆ ನೀಡಿದರು.

ತಾಲೂಕಿನ ಗೋರೆಯಲ್ಲಿ ದಿ.ಜಿ.ಎನ್. ಹೆಗಡೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಜಿ.ಜಿ. ಹೆಗಡೆ ಸ್ಥಾಪಿಸಿದ ನೂತನ ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರಕೃತಿಯ ಪ್ರತಿಯೊಂದು ವಸ್ತುವಿಗೂ ಹೆಸರಿಡುವ ಸಂಪ್ರದಾಯ ಇರುವುದು ಸಹಜ. ಅಂತೆಯೇ ನೂತನವಾಗಿ ಆರಂಭಗೊಳ್ಳಲಿರುವ ಪಿಯು ಕಾಲೇಜಿಗೆ ಎಕ್ಸೆಲೆನ್ಸ್ ಎಂದು ನಾಮಕರಣ ಮಾಡಿರುವುದು ವಿಶೇಷವಾಗಿದೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಶ್ರಮ ಇರುವಲ್ಲಿ ಸರಸ್ವತಿ ನೆಲೆಸುತ್ತಾಳೆ. ಶಿಕ್ಷಣ ನೀಡುವ ಹಾಗೂ ಪಡೆಯುವ ಉತ್ಸಾಹದ ಜೊತೆ ಅನುಭವವಿರಬೇಕು. ಜ್ಞಾನಕ್ಕೆ ಪೇಟೆಂಟ್ ಎನ್ನುವುದಿಲ್ಲ. ಹೀಗಾಗಿ ಭಾರತ ದೇಶದಲ್ಲಿ ವಿಶ್ವದ ಯಾವುದೇ ದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬಹುದು. ಶಿಕ್ಷಣ ನೀಡಲು ಸಜ್ಜಾಗಿ ನಿಂತಿರುವ ಕಟ್ಟದ ಹೂರಣ ಅದ್ಭುತವಾಗಿದೆ. ಇಲ್ಲಿನ ಪರಿಸರ ಎಲ್ಲ ಹಂತದಲ್ಲಿ ಪರಿಶುದ್ಧವಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗೆ ಸರಸ್ವತಿ ಒಲಿಯಲಿದ್ದಾಳೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಸ್ವಚ್ಛ ಪರಿಸರವಿದ್ದಲ್ಲಿ ಭಗವಂತ ನೆಲೆಸುತ್ತಾನೆ. ಡಾ.ಜಿ.ಜಿ. ಹೆಗಡೆ ನೂತನವಾಗಿ ಆರಂಭಿಸಿರುವ ಎಕ್ಸೆಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಯೋಗ ಶಿಕ್ಷಣ ಮತ್ತು ಜೀವನಕ್ಕೆ ಬೇಕಾದ ನೀತಿಯನ್ನು ಉಪನ್ಯಾಸಕರು ಬೋಧಿಸಬೇಕು. ಈ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ರಾಷ್ಟ್ರಭಕ್ತಿ ಬೆಳೆಸಿಕೊಳ್ಳುವ ಜೊತೆಗೆ ದೇಶಕ್ಕೆ ಆಸ್ತಿಯಾಗಬೇಕು ಎಂದು ಸು. ರಾಮಣ್ಣ ಹೇಳಿದರು.

ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜ್ ಕಟ್ಟಡ ಉದ್ಘಾಟನೆ:

ಕುಮಟಾ ತಾಲೂಕಿನ ಗೋರೆಯಲ್ಲಿ ದಿ.ಜಿ.ಎನ್. ಹೆಗಡೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಜಿ.ಜಿ. ಹೆಗಡೆ ಅವರು ಸ್ಥಾಪಿಸಿದ ನೂತನ ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜು ಕಟ್ಟಡವನ್ನು ಸಾನ್ನಿಧ್ಯ ವಹಿಸಿದ್ದ ದೀವಗಿರಿಯ ರಮಾನಂದ ಅವಧೂತ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದ ದೀವಗಿರಿಯ ರಮಾನಂದ ಅವಧೂತ ಸ್ವಾಮೀಜಿ ಫಲ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ದಿ.ಜಿ.ಎನ್. ಹೆಗಡೆ ಟ್ರಸ್ಟ್ ಅಧ್ಯಕ್ಷ ಕೆನರಾ ಹೆಲ್ತ್ ಕೇರ್ ನ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಜಿ.ಜಿ. ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಗುರುಹಿರಿಯರ ಹಾಗೂ ಹಲವರ ಸಹಕಾರದಿಂದ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಬೇಕೆಂಬ ಕನಸು ನನಸಾಗುವ ಹೊಸ್ತಿಲಲ್ಲಿದ್ದೇವೆ. ಉತ್ತಮ ಶಿಕ್ಷಣಕ್ಕಾಗಿ ಜಿಲ್ಲೆಯ ಜನ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆ. ಹೀಗಾಗಿ ಆಧುನಿಕ ಶಿಕ್ಷಣದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಕಲ್ಪವನ್ನು ಹೊಂದಿದ್ದೇವೆ. ಈ ಪಿಯು ಕಾಲೇಜಿನ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ದಿ.ಜಿ.ಎನ್. ಹೆಗಡೆ ಟ್ರಸ್ಟ್ ಕಾರ್ಯದರ್ಶಿ ಡಾ.ಸೀತಾಲಕ್ಷ್ಮೀ ಹೆಗಡೆ ವೇದಿಕೆಯಲ್ಲಿದ್ದರು. ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸಹಕರಿಸಿ, ದಾನ ನೀಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.ಧನ್ಯಾ ಹೆಗಡೆ ಭಕ್ತಿಗೀತೆ ಹಾಡಿದರು. ಪ್ರೊ.ಜಿ.ಡಿ.ಭಟ್ ನಿರೂಪಿಸಿದರು. ನಿಯೋಜಿತ ಪ್ರಾಚಾರ್ಯ ಡಿ.ಎನ್. ಭಟ್ ವಂದಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement