ಅಶ್ಲೀಲ ಚಿತ್ರಗಳ ಪ್ರಕರಣ: ಜುಲೈ 23ರ ವರೆಗೆ ಪೊಲೀಸ್ ಕಸ್ಟಡಿಗೆ ರಾಜ್ ಕುಂದ್ರಾ

ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮತ್ತು ರಿಯಾನ್ ಥಾರ್ಪ್ ಅವರನ್ನು ಜುಲೈ 23ರ ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರ ಅಪರಾಧ ಶಾಖೆ ಸೋಮವಾರ ಬಂಧಿಸಿತ್ತು.. ಸೋಮವಾರ ರಾತ್ರಿ (ಜುಲೈ 19, 2021) ಕೆಲವು ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪ್ರಕಟಿಸಿದ ಆರೋಪದ ಮೇರೆಗೆ ಕುಂದ್ರಾ ಅವರನ್ನು ಬಂಧಿಸಲಾಗಿದೆ.
ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಇದೇ ಪ್ರಕರಣದ ಸಂಬಂಧ ಮಂಗಳವಾರ ಬೆಳಿಗ್ಗೆ ನೆರುಲ್ ಪ್ರದೇಶದಿಂದ ಬಂಧಿಸಲ್ಪಟ್ಟ ರಿಯಾನ್ ಥಾರ್ಪ್ ಅವರನ್ನು ಜುಲೈ 23 ರವರೆಗೆ ಪೊಲೀಸ್‌ ಕಸ್ಟಡಿಗೆ ಕಳುಹಿಸಲಾಗಿದೆ.
ಪಿಟಿಐ ವರದಿಯ ಪ್ರಕಾರ, ಥಾರ್ಪ್ ಅಪ್ಲಿಕೇಶನ್ ಸಂಸ್ಥೆಯೊಂದಿಗೆ ಹಿರಿಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.
ಮುಂಬೈ ಅಪರಾಧ ವಿಭಾಗದ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ, “ಅಶ್ಲೀಲ ಚಲನಚಿತ್ರಗಳ ರಚನೆ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್‌ಗಳ ಮೂಲಕ ಾವುಗಳನ್ನು ಪ್ರಕಟಿಸುವ ಬಗ್ಗೆ ಫೆಬ್ರವರಿ 2021 ರಲ್ಲಿ ಅಪರಾಧ ಶಾಖೆ ಮುಂಬಯಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಾವು ರಾಜ್ ಕುಂದ್ರಾ ಅವರನ್ನು ಜುಲೈ 19ರಂದು ಬಂಧಿಸಿದ್ದೇವೆ. ಅವರು ಇದರ ಪ್ರಮುಖ ಸಂಚುಕೋರರಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಸಾಕಷ್ಟು ಪುರಾವೆಗಳಿವೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ಫೆಬ್ರವರಿ 2021 ರಲ್ಲಿ ಮುಂಬೈ ಅಪರಾಧ ಶಾಖೆಯಲ್ಲಿ ಅಶ್ಲೀಲ ಚಲನಚಿತ್ರಗಳ ರಚನೆ ಮತ್ತು ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿ ತನ್ನ ದೂರಿನಲ್ಲಿ ಕೆಲವು ಆರೋಪಗಳನ್ನು ಮಾಡಿದ ನಂತರ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಅದರ ಆಧಾರದ ಮೇಲೆ, ಎಫ್ಐಆರ್ ನೋಂದಾಯಿಸಲಾಗಿದೆ ಮತ್ತು ಪ್ರಕರಣವನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಯಿತು. ಇದಕ್ಕೂ ಮೊದಲು ಪೊಲೀಸರು ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿದ್ದು, ಇದರಲ್ಲಿ ನಟಿ ಮತ್ತು ಇತರ ಕೆಲವು ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕುಂದ್ರಾ ವಿರುದ್ಧ ಐಪಿಸಿ ಸೆಕ್ಷನ್ಸ್ 420 (ಮೋಸ), 34 (ಸಾಮಾನ್ಯ ಉದ್ದೇಶ), 292 ಮತ್ತು 293 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದ) ಮತ್ತು ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement