ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಅಂತಿಮಗೊಳಿಸುವ ದಿನಾಂಕ ವಿಸ್ತರಣೆ

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 12ನೇ ತರಗತಿ ಫಲಿತಾಂಶವನ್ನು ಜುಲೈ.25ರಂದು ಸಂಜೆ 5ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
ಈ ಕುರಿತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು, ಮಾಹಿತಿ ಬಿಡುಗಡೆ ಮಾಡಿದ್ದು, 12ನೇ ತರಗತಿ ಫಲಿತಾಂಶಗಳನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. 12ನೇ ತರಗತಿಯ ಫಲಿತಾಂಶಗಳನ್ನು ಅಂತಿಮಗೊಳಿಸಲು ಕೊನೆಯ ದಿನಾಂಕ ಜುಲೈ 22 ಆಗಿತ್ತು. ಆದರೆ, ಇದನ್ನು ಜುಲೈ 25ಕ್ಕೆ ಸಂಜೆ 5ರ ) ವಿಸ್ತರಿಸಲಾಗಿದೆ.
ಈ ಮೂಲಕ 12ನೇ ತರಗತಿ ಫಲಿತಾಂಶ ಅಂತಿಮಗೊಳಿಸಲು ಮತ್ತೆ ಮೂರು ದಿನಗಳು ಹೆಚ್ಚುವರಿಯಾಗಿ ದೊರೆತಿದೆ. ಕೊನೆಕ್ಷಣದಲ್ಲಿ ಯಾವುದಾದರು ಸಾಳೆಗೆ ಫಲಿತಾಂಶವನ್ನು ಅಂತಿಮಗೊಳಿಸಲು ಸಾಧ್ಯವಾಗದಿದ್ದರೆ ಆ ಸಾಲೆಯ ಫಲಿತಾಂಶವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ