2 .50 ಲಕ್ಷ ರೂ. ಲಂಚ ಪಡೆಯುತ್ತಿದ್ದ ಸರ್ವೇಯರ್ ಎಸಿಬಿ ಬಲೆಗೆ

posted in: ರಾಜ್ಯ | 0

ಯಾದಗಿರಿ: ಹುಣಸಗಿ ಪಟ್ಟಣದ ಕಕ್ಕೇರಿ ಕ್ರಾಸ್ ಹತ್ತಿರ ಸರ್ವೇಯರ್ ರವಿಕುಮಾರ್ ಅವರು ಮಂಗಳವಾರ ಎಸಿಬಿ ಅಧಿಕಾರಿಗಳು ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬನಹಟ್ಟಿ ಗ್ರಾಮದ ಮಹಾದೇವಪ್ಪ ಬಡಿಗೇರ್ ಎಂಬುವವರ ಹೊಲ ಸರ್ವೆ ನಂಬರ್ 53ರ 12 ಎಕರೆ ಭೂಮಿಯಲ್ಲಿ 4 ಎಕರೆ 30 ಗುಂಟೆ ಪ್ರತ್ಯೇಕ ಮಾಡಿ ಸರ್ವೆ ಮಾಡುವ ವಿಷಯದಲ್ಲಿ 2,50,000 ರೂಪಾಯಿ ಲಂಚದ ಹಣ ಪಡೆಯುತ್ತಿರುವಾಗ ಎಸಿಬಿ ಪೊಲೀಸ್ ಅಧಿಕ್ಷರಾದ ಮಹೇಶ್ ಮೇಘಣ್ಣವರ್ ಹಾಗೂ ತಂಡದ ಕೈಗೆ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಡಿವೈಎಸ್ಪಿ ಉಮಾ ಶಂಕರ್ ಯಾದಗಿರಿ, ಪಿ. ಐ. ಬಾಬಾಸಾಬ ಪಟೇಲ್, ಪಿಐ ಗುರುಪಾದ ಬಿರಾದಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಹುಣಸಗಿಯ ಸರ್ವೇಯರ್ ರವಿಕುಮಾರ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ