ಜೆ.ಎಸ್.ಎಸ್. ಸಂಸ್ಥೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ

ಧಾರವಾಡ: ಜೆ.ಎಸ್.ಎಸ್. ಶ್ರೀ. ಮಂಜುನಾಥೇಶ್ವರ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾಗಿರಿ ಧಾರವಾಡ. ವಿದ್ಯಾರ್ಥಿಗಳು ೨೦೨೦-೨೧ ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಭವ್ಯಶ್ರೀ ಶ್ರೀಪಾದ ದೇಶಪಾಂಡೆ ಹಾಗೂ ಶ್ರಾವಣಿ ಹೀರೆಮಠ ೬೦೦/೬೦೦ ಅಂಕ ಗಳಿಸಿ ರಾಜ್ಯ ಮಟ್ಟದ ಪ್ರಥಮ ಸ್ಥಾನದಲ್ಲಿ ಭಾಗಿಯಾಗಿದ್ದಾರೆ. ಈ ವರ್ಷದ ಪರೀಕ್ಷೆಗೆ ಹಾಜರಾದ ೨೭೦ ವಿದ್ಯಾರ್ಥಿಗಳಲ್ಲಿ ೩೨ ವಿದ್ಯಾರ್ಥಿಗಳು ೯೫% ಕ್ಕಿಂತ ಅಧಿಕ ೫೫ ವಿದ್ಯಾರ್ಥಿಗಳು ೯೦% ಕ್ಕಿಂತ ಅಧಿಕ ಹಾಗೂ ೬೯ ವಿದ್ಯಾರ್ಥಿಗಳು ೮೫% ಕ್ಕಿಂತ ಅಧಿಕ ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಶ್ರೀಲಕ್ಞ್ಮೀ ಹಾಗೂ ಕುಮಾರಿ ವೈಷ್ಣವಿ ಆಕಳವಾಡಿ ಇವರು ೬೦೦ ಕ್ಕೆ ೫೯೪ ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೧೬೭ ವಿದ್ಯಾರ್ಥಿಗಳಲ್ಲಿ ೧೯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ೧೨೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಧನೆಗೆ ಮೆಚ್ಚಿ ಜನತಾ ಶಿಕ್ಷಣ ಸಮಿತಿ ಕಾರ್ಯಾದ್ಯಕ್ಷರೂ, ಎಸ್.ಡಿ.ಎಮ್ ಸಂಸ್ಥೆ ಉಜಿರೆಯ ಅಧ್ಯಕ್ಷರೂ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ.ಡಿ.ವಿರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಾ.ನ.ವಜ್ರಕುಮಾರ, ವಿತ್ತಾಧಿಕಾರಿ ಡಾ.ಅಜಿತಪ್ರಸಾದ, ಪ್ರಾಚಾರ್ಯ ಡಾ.ವಾಯ್.ಎಸ್. ರಾಯಬಾಗಿ, ಮಹಾವಿದ್ಯಾಲಯದ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ