ಅಶ್ಲೀಲ ಚಿತ್ರಗಳ ತಯಾರಿಕೆ ಆರೋಪಿ ರಾಜ್ ಕುಂದ್ರಾ ಒಟ್ಟು ಆಸ್ತಿ ಮೌಲ್ಯ ೩೫೦ ಮಿಲಿಯನ್ ಡಾಲರ್..?

ಮುಂಬಯಿ: ಅಶ್ಲೀಲ ಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಈಗ ಪೊಲೀಸರ ವಶದಲ್ಲಿದ್ದು, ಹಲವು ಉದ್ಯಮಗಳನ್ನು ನಡೆಸುತ್ತಿರುವ ಅವರ ಒಟ್ಟು ಆಸ್ತಿ ಮೌಲ್ಯ ೩೫೦ ಮಿಲಿಯನ್ ಡಾಲರ್ ಎಂಬ ಮಾಹಿತಿ ಹೊರಬಿದ್ದಿದೆ.

ಐಷಾರಾಮಿ ಜೀವನ ನಡೆಸುತ್ತಿರುವ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರು ಅನೇಕ ಮೂಲಗಳಿಂದ ಹಣ ಗಳಿಸುತ್ತಿದ್ದಾರೆ. ಅಶ್ಲೀಲ ಸಿನಿಮಾ ದಂಧೆಯಲ್ಲಿ ರಾಜ್ ಕುಂದ್ರಾ ಸಿಕ್ಕಿಬಿದ್ದ ನಂತರ ಅವರ ವಿಚಾರಣೆ  ಬಳಿಕ ಹಲವಾರು ಮಹತ್ವದ ಸಂಗತಿಗಳು ಹೊರ ಬೀಳುತ್ತಿವೆ.

ಒಂದು ಮೂಲದ ಪ್ರಕಾರ, ಅವರು ೩೫೦ ಮಿಲಿಯನ್ ಡಾಲರ್ ಹೊಂದಿದ್ದಾರೆ. ಅಂದರೆ, ಸುಮಾರು ೨೬೦೦ ಕೋಟಿ ರೂ.! ಇನ್ನೊಂದು ಮೂಲದ ಪ್ರಕಾರ ೫೫೦ ಮಿಲಿಯನ್ ಡಾಲರ್ (೪ ಸಾವಿರ ಕೋಟಿ ರೂ.) ಮೊತ್ತದ ಆಸ್ತಿಯನ್ನು ರಾಜ್ ಕುಂದ್ರಾ ಹೊಂದಿದ್ದಾರೆ ಎನ್ನಲಾಗುತ್ತಿದೆ. ರಾಜ್ ಕುಂದ್ರಾ ಪತ್ನಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆದಾಯವೂ ಸಾಕಷ್ಟಿದ. ಸಿನಿಮಾಗಳಿಂದ ದೂರ ಉಳಿದಿದ್ದರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಒಂದು ಸಿನಿಮಾಗೆ ಅವರು ೩ ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹಲವು ಬ್ರ್ಯಾಂಡ್ ಗಳಿಗೆ ರಾಯಭಾರಿ ಆಗಿರುವ ಅವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ರಿಯಾಲಿಟಿ ಶೋಗಳಿಗೆ ಜರ್ಡ್ ಆಗಿಯೂ ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದು, ಅಲ್ಲಿಯೂ ಅವರಿಗೆ ಒಳ್ಳೆಯ ಸಂಭಾವನೆ ಇದೆ. ದೇಶದ ಹಲವು ಭಾಗಗಳಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಆಸ್ತಿ ಹೊಂದಿದ್ದಾರೆ.

ಪ್ರತಿ ವರ್ಷ ಅಂದಾಜು ೧೨೦ ಕೋಟಿ ರೂ. ಆದಾಯ ರಾಜ್ ಕುಂದ್ರಾಗೆ ಬರುತ್ತದೆ ಎನ್ನಲಾಗಿದ್ದು, ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಸಹ-ಮಾಲೀಕತ್ವವನ್ನು ಈ ದಂಪತಿ ಹೊಂದಿದ್ದಾರೆ.

ವಿಯಾನ್ ಇಂಡಸ್ಟ್ರೀಸ್, ಗ್ರೂಪ್ಕೋ ಡೆವೆಲಪರ್ಸ್, ಟಿಎಂಟಿ ಗ್ಲೋಬಲ್, ಜೆಎಲ್ ಸ್ಟ್ರೀಮ್ ಪ್ರೈವೇಟ್ ಲಿಮಿಡೆಟ್ ಸೇರಿದಂತೆ ಹಲವು ಉದ್ಯಮಗಳನ್ನು ರಾಜ್ ಕುಂದ್ರಾ ಹೊಂದಿದ್ದಾರೆ.

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ